ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಪವಿತ್ರವಾದ ಗೋಮಾತೆ ಪೂಜ್ಯನೀಯವಾಗಿದ್ದು, ದೇಶಿಯ ಗೋ ತಳಿಯ ಸಂತತಿ ನಶಿಸಿ ಹೋಗುತ್ತಿದ್ದು ಗೋತಳಿಯ ಸಂಕ್ಷಣೆಗಾಗಿ "ಮಾನ್ಯ ಕರ್ನಾಟಕ ಸರ್ಕಾರ" "ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020" ನ್ನು ಜಾರಿಗೆ ತಂದಿದ್ದು ರಾಜ್ಯದಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದರೂ ಸಹಿತ ಹಾನ ಗಲ್ಲ ತಾಲೂಕಿನಾದ್ಯಂತ ಕಾನೂನು ಬಾಹಿರವಾಗಿ ಅಕ್ರಮ ಕಸಾಯಿಖಾನೆಗಳು ನಾಯಿ ಕೊಡೆಯಂತೆ ತಲೆಯೆತ್ತಿದ್ದು, ಮಾಂಸಕ್ಕಾಗಿ, ಹಣಗಳಿಸುವುದಕ್ಕಾಗಿ ವ್ಯಾಪಕವಾಗಿ ಗೋಹತ್ಯೆಯು ನಡೆಯುತ್ತಿವೆ.
ಕಾನೂನಿನ ಚೌಕಟ್ಟು ಮೀರಿ ಗೋಸಾಗಾಟಕರು ಅಕ್ಕಿಆಲೂರು ರಾಣೇಬೆನ್ನೂರು, ಹಾನಗಲ್ ಹಾವೇರಿಯ ಮೂಲೆ ಮೂಲೆಗಳಲ್ಲಿ ಪರವಣಿಗೆ ರಹಿತ ಕಸಾಯಿ ಖಾನೆ ನಡೆಸುತ್ತಿದ್ದಾರೆ ಎಂದು ಖಚಿತ ಮಾಹಿತಿ ತಿಳಿದುಬಂದಿದೆ.
ಮೂರು ತಿಂಗಳಿನ ಒಳಗೆ ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಕಸಾಯಿ ಖಾನೆ ಗೋಮಾಂಸ ಮಾರಾಟ ಮಾಡಿದ್ದು ನಾಲ್ಕು ಪ್ರಕರಣಗಳು ದಾಖಲಾಗಿದೆ.
( ಹಾನಗಲ್ಲ ಎರಡು ಪ್ರಕರಣ ಅಕ್ಕಿ ಆಲೂರು ಎರಡು ಪ್ರಕರಣ)
ಅಡೂರು ಠಾಣಾ ವ್ಯಾಪ್ತಿ ಒಳಗಡೆ ಒಂದು ಪ್ರಕರಣ ದಾಖಲಾಗಿದೆ.
ಅಕ್ರಮ ಕಸಾಯಿಕಾನೆ ಹಾಗೂ ಗೋಸಾಗಾಟಕರ ವಿರುದ್ಧ ಕ್ರಮ ಕೈಗೊಳ್ಳಬೇಕು ವಿಫಲರಾದಲ್ಲಿ ಹಿಂದೂ ಸಮಾಜ ಸಾಮೂಹಿಕ ಪ್ರತಿಭಟನೆ ನೇರವಾಗಿ ಕಸಾಯಿ ಖಾನೆಗೆ ಮಾಡುತ್ತೇವೆ ಎಂದು ಹಿಂದೂ ಹಿತರಕ್ಷಣ ವೇದಿಕೆ ಹಾನಗಲ್ ನಪ್ರಮುಖರು ಎಚ್ಚರಿಕೆ ನೀಡಿದ್ದಾರೆ