ಕಾಸರಗೋಡು: ಕುಂಬಳೆಯ ಪ್ರಸಿದ್ಧ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದ ಉತ್ತೇಜನಕ್ಕೆ ಹೊಸ ಡ್ರೆಸ್ ಕೋಡ್ (ಉಡುಗೆ ನಿಯಮ) ಜಾರಿಯಾಗಿದೆ. 2025 ಜನವರಿ 1ರಿಂದ, ದೇವಸ್ಥಾನಕ್ಕೆ ಪ್ರವೇಶ ಮಾಡುವ ಭಕ್ತರು ಕಡ್ಡಾಯವಾಗಿ ಹಿಂದು ಸಾಂಪ್ರದಾಯಿಕ ಉಡುಗೆಯನ್ನೇ ಧರಿಸಬೇಕೆಂದು ಮಂದಿರದ ಆಡಳಿತ ಮಂಡಳಿ ಸೂಚಿಸಿದ್ದಾರೆ.
ಶಿಫಾರಸು ಮಾಡಲ್ಪಟ್ಟ ಉಡುಗೆಗಳು:
ಪುರುಷರು: ಧೋತಿ, ಕುಪ್ಸಿ, ಕುರ್ತಾ ಅಥವಾ ಇತರ ಹಿಂದು ಸಾಂಪ್ರದಾಯಿಕ ಉಡುಪುಗಳು.
ಮಹಿಳೆಯರು: ಸೀರೆ, ಲಂಗ ದಾವಣಿ, ಸಾಂಪ್ರದಾಯಿಕ ಚುಡಿದಾರ್.
ಪ್ರವೇಶಕ್ಕೆ ನಿಷೇಧವಾದ ಉಡುಪುಗಳು:
ಪ್ಯಾಂಟ್, ಶರ್ಟ್, ಟೀ-ಶರ್ಟ್, ಜೀನ್ಸ್, ಸ್ಕರ್ಟ್, ಅಥವಾ ಇತರ ಪಾಶ್ಚಾತ್ಯ ಉಡುಗೆಗಳು.
ಈ ನಿಯಮವನ್ನು ಭಕ್ತರು ಪಾಲಿಸಿ, ದೇವಾಲಯದ ಶ್ರದ್ಧಾ ಮತ್ತು ಪರಂಪರೆಯ ಮೌಲ್ಯವನ್ನು ಉಳಿಸಲು ಸಹಕರಿಸಬೇಕು ಎಂದು ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.