ಹಿಂದೂಗಳೇ ಕೃಷಿಭೂಮಿ ಮಾರಾಟ ಮಾಡ್ತೀರಾ..? ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿತು ಮಹತ್ವದ ತೀರ್ಪು..!

  • 21 Nov 2024 12:45:36 AM

ರಿಪಬ್ಲಿಕ್ ಹಿಂದೂ:- ಕೃಷಿ ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಕಾನೂನುಗಳು ಜಾರಿಯಾಗುತ್ತಲೇ ಇರುತ್ತದೆ. ಇದೀಗ ಹಿಂದೂಗಳ ಕೃಷಿ ಭೂಮಿ ಮಾರಾಟಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. 

*ಸುಪ್ರೀಂಕೋರ್ಟ್ ಮಹತ್ವದ ತೀರ್ಪೇನು...?*

ಹಿಂದೂ ವಾರಸುದಾರರು ತಮ್ಮ ಪೂರ್ವಜರ ಕೃಷಿ ಭೂಮಿಯನ್ನು ಒಂದು ವೇಳೆ ಮಾರಾಟ ಮಾಡಲು ಬಯಸಿದರೆ ಅದನ್ನು ಹೊರಗಿನವರಿಗೆ ಮಾರದೆ ಅವರು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 

*ಈ ವಿಚಾರದಲ್ಲಿ ಸುಪ್ರೀಂ ನಿಲುವೇನು ಗೊತ್ತಾ...?*

ಕೃಷಿ ಭೂಮಿ ಸೆಕ್ಷನ್ ೨೨ರ ನಿಬಂಧನೆಗಳ ಅಡಿಯಲ್ಲಿ ಬರುವಂತೆ ಒಬ್ಬ ವ್ಯಕ್ತಿಯು ಉಯಿಲು ಇಲ್ಲದೆ ಮರಣ ಹೊಂದಿದಾಗ ಅವನ ಆಸ್ತಿಯು ಅವನ ವಾರಸುದಾರರಿಗೆ ಹಂಚಿಕೆಯಾಗುತ್ತದೆ. ವಾರಸುದಾರ ತನ್ನ ಪಾಲನ್ನು ಮಾರಾಟ ಮಾಡಲು ಬಯಸಿದರೆ  ಅವನು ಉಳಿದ ವಾರಸುದಾರರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಕುಟುಂಬದ ಆಸ್ತಿ ಕುಟುಂಬದೊಳಗೆ ಉಳಿಯುತ್ತದೆ. ಮತ್ತು ಅದರಲ್ಲಿ ಬೇರೆಯವರು ತೊಡಗಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.