ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಕೊಟ್ಟ ಆಂಧ್ರ ಸರ್ಕಾರ!; ಇನ್ಮುಂದೆ ತಿರುಪತಿ ಯಾತ್ರೆ ಬಲು ಆರಾಮ!

  • 21 Nov 2024 11:34:16 AM

ರಿಪಬ್ಲಿಕ್ ಹಿಂದೂ:- ದೇಶದ ಅತ್ಯಂತ ಸಿರಿವಂತ ದೇಗುಲ ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕೆ ಪ್ರತೀ ದಿನ ಲಕ್ಷಾಂತರ ಭಕ್ತರು ಜಗತ್ತಿನ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ. ಪ್ರತಿನಿತ್ಯ ಸಾಗರೋಪಾದಿಯಲ್ಲಿ ಭಕ್ತರು ಬರುವ ಕಾರಣ ಸಾಕಷ್ಟು ಭಕ್ತರಿಗೆ ತಿಮ್ಮಪ್ಪನ ದರ್ಶನ ಆಗುವ ವೇಳೆಗೆ ಜೀವ ಬಾಯಿಗೆ ಬಂದು ಬಿಟ್ಟಿರುತ್ತದೆ. ಅಷ್ಟೊಂದು ಜನರ ನಡುವೆ ಕಾದು, ಬಸವಳಿದು, ಸಾಕಷ್ಟು ಸಮಯ ಮೀಸಲಿಟ್ಟರೂ ಕೂಡ ಕೆಲವೊಮ್ಮೆ ದೇವರ ದರ್ಶನವಾಗದೆ ಹಿಂದಿರುಗಬೇಕಾಗುತ್ತದೆ. ಸದ್ಯ, ಈ ಎಲ್ಲ ಸಮಸ್ಯೆಗಳನ್ನು ಅರಿತಿರುವ ಆಂಧ್ರ ಸರ್ಕಾರ ಹೊಸದೊಂದು ತೀರ್ಮಾನಕ್ಕೆ ಬಂದಿದ್ದು, ಇದು ತಿಮ್ಮಪ್ಪನ ಭಕ್ತರಿಗೆ ತಿರುಪತಿ ಲಡ್ಡುವಿನಷ್ಟೇ ಸಿಹಿ ಸುದ್ದಿಯಾಗಲಿದೆ!

 

3 ಗಂಟೆಯಲ್ಲಿ ತಿಮ್ಮಪ್ಪನ ದರ್ಶನ!

 

ಪ್ರತೀ ದಿನ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಗಂಟೆಗಟ್ಟಲೆ ಕಾಯಬೇಕು. ಆದರೆ ಇನ್ಮಮುಂದೆ ಈ ಸಮಸ್ಯೆ ಇರುವುದಿಲ್ಲ‌. ಹೌದು, ತಿರುಪತಿ ತಿಮ್ಮಪ್ಪ ದೇಗುಲದ ಆಡಳಿತ ಮಂಡಳಿಯು ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹೊಸ ದರ್ಶನ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದೆ.ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ಇನ್ಮುಂದೆ ಭಕ್ತರು 2ರಿಂದ 3 ಗಂಟೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದು ಮರಳ ಬಹುದಾಗಿದೆ.

 

ಹತ್ತಾರು ಬದಲಾವಣೆ ತಂದ ಆಂಧ್ರ ಸರ್ಕಾರ!

 

ಇತ್ತೀಚೆಗೆ ಟಿಟಿಡಿ ಲಡ್ಡು ವಿಚಾರದಲ್ಲಿ ಸಾಕಷ್ಟು ದೊಡ್ಡ ಚರ್ಚೆಯಾದ ಬಳಿಕ ಆಂಧ್ರ ಸರ್ಕಾರ ಹಲವು ಬದಲಾವಣೆ ತರಲು ಚಿಂತನೆ ನಡೆಸಿದೆ. ದೇಗುಲದಲ್ಲಿ ಅನ್ಯಕೋಮಿನ ಉದ್ಯೋಗಿಗಳಿಗೆ ಕೋಕ್ ನೀಡಲಾಗಿದೆ. ಜೊತೆಗೆ ವಿಐಪಿ ದರ್ಶನವನ್ನು ಕೂಡ ರದ್ದು ಮಾಡಲು ಚಿಂತನೆ ನಡೆಸಿದೆ. ಒಟ್ಟಾರೆಯಾಗಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಅನುಕೂಲವಾಗುವ ರೀತಿಯ ಹಲವು ಬದಲಾವಣೆಗಳನ್ನು ಆಂಧ್ರ ಸರ್ಕಾರ ಇದೀಗ ಜಾರಿಗೊಳಿಸುತ್ತಿದೆ.