ಅಡ್ಯನಡ್ಕ - ಕಲ್ಲಡ್ಕ-ಚೆರ್ಕಳ ರಸ್ತೆ: ಟಿಪ್ಪರ್ ಚಾಲಕರ ನಿರ್ಲಕ್ಷ್ಯಕ್ಕೆ ತುತ್ತಾದ ಪದಾಚಾರಿಯ ಸ್ಥಿತಿ ಚಿಂತಾಜನಕ, ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆರೋಪ ಪ್ರಾಣ ಭೀತಿಯಲ್ಲಿ ನಾಗರಿಕರು,ಸವಾರರು: ಸೂಕ್ತ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಒತ್ತಾಯ!!!

  • 21 Nov 2024 03:15:03 PM

ಅಡ್ಯನಡ್ಕ: ಕಲ್ಲಡ್ಕ_ಚೆರ್ಕಳ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಚಾಲಕರ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದಾಗಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು  ಸಾರ್ವಜನಿಕರಲ್ಲಿ ಭಯದ ಜೊತೆಗೆ ಆಕ್ರೋಶವನ್ನು ಉಂಟುಮಾಡಿದೆ.

ನವೆಂಬರ್ 21, 2024, ಗುರುವಾರ ಬೆಳಗ್ಗೆ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಟಿಪ್ಪರ್ ವಾಹನವು ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಗಾಯಳು ವಾದನಾಗಪ್ಪ (55) ನಲ್ಕ ಖಂಡಿಗೆ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಈಗ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಟಿಪ್ಪರ್ ಚಾಲಕರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಟಿಪ್ಪರ್ ವಾಹನಗಳು ತೂಕದ ಮಿತಿಗಿಂತ  ಹೆಚ್ಚು ಮರಳು, ಜಲ್ಲಿ, ಎಂ-ಸ್ಯಾಂಡ್ ಮೊದಲಾದ ವಸ್ತುಗಳನ್ನು ತೀವ್ರ ವೇಗದಲ್ಲಿ ಸಾಗಿಸುತ್ತಿದ್ದು, ಇದು  ವಾಹನ ಸವಾರರಿಗೂ  ಪಾದಚಾರಿಗಳಿಗೂ  ಜೀವಾಪಾಯದ ಭೀತಿಯನ್ನು ಸೃಷ್ಟಿಸಿದೆ. ಗ್ರಾಮದ ರಸ್ತೆಗಳಲ್ಲಿ ಸಾಗುವ ಈ ವಾಹನಗಳು ಶಾಲಾ ಮಕ್ಕಳಿಗೆ ಸೇರಿದಂತೆ ಹಲವರಿಗೆ ಅಪಾಯಕಾರಿಯಾಗಿದೆ.ಇದಕ್ಕೆ ಸಂಬದಪಟ್ಟ ಎಲ್ಲ ಇಲಾಖೆಯವರು ಈ ಕುರಿತು ಕ್ರಮ ಕೈಗೊಳ್ಳುವುದರಲ್ಲಿ ವಿಳಂಬ ಮಾಡುತ್ತಿದ್ದು, ಹಲವಾರು ಸಂದರ್ಭಗಳಲ್ಲಿ ದೂರು ನೀಡುವ ನಾಗರೀಕರನ್ನೇ  ಬೆದರಿಸುವಂತೆ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜನರಲ್ಲಿ ಇದು ಲಂಚಾವತಾರದ ಪಾಲನೆಯ ಫಲಿತಾಂಶವೇ? ಎಂಬ ಅನುಮಾನವು ಹುಟ್ಟುತ್ತಿದೆ.

ಅನಧಿಕೃತ ವಾಹನ ಸಂಚಾರದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದೂ ವಾಹನದ ತೂಕ, ವೇಗ, ಮತ್ತು ಡ್ರೈವಿಂಗ್ ಮಾನದಂಡಗಳಿಗೆ ಸಂಬಂಧಿಸಿದ ನಿಯಮಿತ ತಪಾಸಣೆಯ ನಿರ್ವಹಣೆ,ಅಪಘಾತಗಳಿಗೆ ಕಾರಣವಾಗುವ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ  ಮತ್ತು ಶಾಲಾ ಸಮಯದಲ್ಲಿ ಟಿಪ್ಪರ್ ಸಂಚಾರವನ್ನು ನಿಷೇಧಿಸಿ ಎನ್ನುವಂತಹ ನಿಯಮಗಳು ಇಡಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಕಲ್ಲಡ್ಕ-ಚೆರ್ಕಳ ಹೆದ್ದಾರಿ ಇದೀಗ ಅಪಘಾತ ಪ್ರದೇಶವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ. ನಿರ್ಲಕ್ಷ್ಯ ಮುಂದುವರಿದರೆ ಅಡ್ಯನಡ್ಕ ಕೂಡ  ಬಳ್ಳಾರಿಯಂತಹ ಅಪಾಯದ ಪ್ರದೇಶವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.