ರಿಪಬ್ಲಿಕ್ ಹಿಂದೂ:- ತಂತ್ರಜ್ಞಾನ ಮುಂದುವರೆದಂತೆ ಶಾಲೆ ಕಲಿಯುವ ಮಕ್ಕಳು ಕೂಡಾ ಅತೀ ಶೀಘ್ರವಾಗಿ ಪ್ರಬುದ್ಧರಾಗುತ್ತಿದ್ದಾರೆ. ಪ್ರಬುದ್ಧತೆ ಕೇವಲ ಒಳ್ಳೆ ವಿಚಾರಗಳಲ್ಲಿ ಇದ್ದರೆ ಉತ್ತಮ. ಆದರೆ ಇತ್ತೀಚೆಗೆ ಸಮಾಜದಲ್ಲಿ ಕೇವಲ ದೊಡ್ಡವರು ಮಾತ್ರವಲ್ಲದೆ ಮಕ್ಕಳ ಮೇಲೆ ಕೂಡಾ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅನ್ಯಧರ್ಮದ ಕಾಮುಕ ಕ್ರಿಮಿಗಳು ಹಿಂದೂ ಯುವತಿಯರ ಮೇಲೆರಗಿ ಯಾವ ಕಾನೂನಿನ ಭಯವೂ ಇಲ್ಲದೆ ತಮ್ಮ ಕಾಮದಾಹವನ್ನು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಈ ಸಾಲಿನಲ್ಲಿ ಅಪ್ರಾಪ್ತರು ಕೂಡಾ ಸೇರಿದ್ದಾರೆ ಎಂದರೆ ನಿಜಕ್ಕೂ ನಂಬಲು ಅಸಾಧ್ಯ. ಆದರೆ ಇಂತಹುದೇ ಒಂದು ಪ್ರಕರಣ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕನಿಂದ ಯುವತಿಯ ಮಾನಭಂಗಕ್ಕೆ ಯತ್ನ...!
ಅಪ್ರಾಪ್ತ ಬಾಲಕನೊಬ್ಬ ನಡುರಸ್ತೆಯಲ್ಲೇ ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಗ್ರಾಮದ ಕಾಂಪಾಡಿ ಬಳಿ ನಡೆದಿದೆ. ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಶಾಲೆ ಕಲಿತು ಸುಸಜ್ಜಿತ ನಾಗರಿಕರಾಗಬೇಕಾದ ಮಕ್ಕಳು ಇಂತಹ ನೀಚಕೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ನಿಜಕ್ಕೂ ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿಕೊಳ್ಳುತ್ತಿದ್ದಾರೆ.
ನಡೆದ ಘಟನೆ ಏನು..?
ಯುವತಿಯೋರ್ವಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದ ಬಾಲಕನೋರ್ವ ಆಕೆಯ ದೇಹ ಸ್ಪರ್ಶಿಸಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂದರ್ಭ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ಬಾಲಕನನ್ನು ಕೊಣಾಜೆ ಪೊಲೀಸರ ವಶಕ್ಕೆ ನೀಡಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.