ಡಾ. ಯತೀಂದ್ರ ಸಿದ್ಧರಾಮಯ್ಯ:- ಭಾರತ ಹಿಂದೂ ರಾಷ್ಟ್ರ ಆಗುವ ಕನಸು ನನಸಾಗಲು ಸತ್ರೂ ಅವಕಾಶ ಕೊಡೋದಿಲ್ಲ....! ಡಾ. ಯತೀಂದ್ರ ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆಯ ವಿರುದ್ಧ ಆಕ್ರೋಶಗೊಂಡಿರುವ ವ ಹಿಂದೂ ಜನತೆ

  • 22 Nov 2024 02:29:59 PM

ಮೈಸೂರು : ಸನಾತನ ಪರಂಪರೆಯಲ್ಲಿ ವಿಶ್ವಗುರು ಎನ್ನಿಸಿಕೊಳ್ಳುವ ಭವ್ಯ ರಾಷ್ಟ್ರವಾದ ಭಾರತದ ಮೇಲೆ ಅನೇಕರ ಕಣ್ಣು ಬಿದ್ದಿದೆ. ಸಂಸ್ಕೃತಿಯ ವಿಚಾರದಲ್ಲಿ ಭಾರತವು ವಿಶ್ವದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿದೆ. ಅಂತಹದರಲ್ಲಿ ಇಂತಹ ಪುಣ್ಯ ಭೂಮಿಯಲ್ಲಿದ್ದು ಕೊಂಡೇ ದೇಶದ್ರೋಹಿಗಳಿಗೆ ಉಪಕಾರಗೈದು ತಮ್ಮ ಬೇಳೆ ಬೇಯಿಸುತ್ತಿರುವ ನೀಚ ಬುದ್ಧಿಯುಳ್ಳ ಜನರು ಕೂಡಾ ಇದ್ದಾರೆ. ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ನಾಯಕರು ಅನ್ಯಮತೀಯರ ಮತಕ್ಕಾಗಿ ಕೆಲವೊಂದು ಟೀಕಾತ್ಮಕ ಹೇಳಿಕೆಗಳನ್ನು ನೀಡಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ. ಇದೀಗ ರಾಜ್ಯದ ಸಿಎಂ ಅವರ ಪುತ್ರನು ಇನ್ನೊಂದು ಭಾರಿ ವಿವಾದಾತ್ಮಕ ಹೇಳಿಕೆಯನ್ನು ನೀಡುವುದರ ಮೂಲಕ ಮತ್ತೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. 

 

*ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕನಸು ನನಸಾಗಲು ಬಿಡಲ್ಲ- ಯತೀಂದ್ರ ಸಿದ್ಧರಾಮಯ್ಯ*

 

*ಭಾರತವನ್ನು ಕೇವಲ ಒಂದೇ ಧರ್ಮದ ರಾಷ್ಟ್ರವಾಗಿಸುವ ಪದ್ಧತಿಗಳು ನಡೆಯುತ್ತಿದೆ. ನಾವುಗಳು ಅದಕ್ಕೆ ಅವಕಾಶ ಮಾಡಿಕೊಡಬಾರದು ಇದೇ ನಮ್ಮ ಮೂಲ ಧ್ಯೇಯವಾಗಬೇಕು* ಎನ್ನುವ ಹೇಳಿಕೆಯ ಮೂಲಕ ಹಿಂದೂ ರಾಷ್ಟ್ರದ ಕಲ್ಪನೆಗೆ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇವರು ಮೈಸೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತುಗಳಿವು. ಯತೀಂದ್ರ ಸಿದ್ದರಾಮಯ್ಯ ಅವರು, ಭಾರತವು ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ದೇಶವಾಗಿದೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ರಾಷ್ಟ್ರವಾಗಿಸಿ ಇತರ ಧರ್ಮದವರನ್ನು ಕಡೆಗಣಿಸಲು ಯತ್ನಿಸುತ್ತಿದ್ದಾರೆ. ಅದನ್ನು ನಾವು ವಿರೋಧಿಸಬೇಕು. ಅಂಬೇಡ್ಕರ್ ಸಂವಿಧಾನ ಇರುವವರೆಗೂ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ. ದೇಶದ ಸಂವಿಧಾನವು ಎಲ್ಲರ ಹಕ್ಕು ಎಂದು ಹೇಳಿದರು.

 

*ಒಂದು ಸಮುದಾಯ ಮಾತ್ರ ಮೇಲುಗೈ ಸಾಧಿಸಲು ಹೋದರೆ ದೇಶ ಉಳಿಯುದು ಸಾಧ್ಯವೇ?*

ದೇಶದ ಸಂವಿಧಾನಕ್ಕೆ ಬದ್ಧವಾಗಿ ದೇಶ ಸಾಗಬೇಕು. ಇಲ್ಲಿ ಒಂದು ಧರ್ಮದ ಜನರು ಮಾತ್ರ ವಾಸಿಸುತ್ತಿಲ್ಲ. ಹಾಗಿರುವಾಗ ಭಾರತವನ್ನು ಕೇವಲ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಿಡೋ ಮಾತೇ ಇಲ್ಲ. ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಹೊರಟಿರುವುದು ಬಹಳ ಅಪಾಯಕರ ಸಂಗತಿ. ಯಾವುದಾದರು ಒಂದು ಸಮುದಾಯಕ್ಕೆ ಈ ದೇಶವನ್ನು ಸೇರಿಸಿ ಒಂದು ಸಮುದಾಯ ಮೇಲುಗೈ ಸಾಧಿಸಬೇಕು ಅಂತ ಹೋದ್ರೆ ಆಗ ಈ ದೇಶ ಉಳಿಯಲು ಸಾಧ್ಯವಿಲ್ಲ ಎಂದು ಯತೀಂದ್ರ ಸಿದ್ಧರಾಮಯ್ಯ ಅವರು ಕಿಡಿಕಾರಿ ಮಾತನಾಡಿದರು