ಕಾಟುಕುಕ್ಕೆ ಶಾಲೆಯಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ದತ್ತ ಯುವ ಪೀಳಿಗೆಯಲ್ಲಿ ಜಾಗೃತಿ

  • 20 Oct 2024 10:45:25 AM

ಪೆರ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಜೇಶ್ವರ ತಾಲೂಕು ಹಾಗೂ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ದತ್ತ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಫ್ರೌಢ ಶಾಲೆಯಲ್ಲಿ ಜರಗಿತು.

 

 

ಶಾಲಾ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಎಂ. ಉದ್ಘಾಟಿಸಿದರು. ಬದಿಯಡ್ಕ ವಲಯ ಅಬಕಾರಿ ಇಲಾಖೆಯ ಜನಾರ್ಧನ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನಡೆಸಿದರು. ಜನ ಜಾಗೃತಿ ವಲಯಾಧ್ಯಕ್ಷ ಬಿ.ಪಿ.ಶೇಣಿ, ಸೇವಾ ಪ್ರತಿನಿಧಿಗಳಾದ ರೇಖಾ ಜ್ಯೋತಿ ಉಪಸ್ಥಿತರಿದ್ದರು. ಚಂದ್ರಹಾಸ ಎ. ಸ್ವಾಗತಿಸಿ ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿದರು. ಶಿಕ್ಷಕಿ ಶಿಲ್ಪಾ ನಿರೂಪಿಸಿದರು.