ಬಂಟ್ವಾಳ: ವಿಟ್ಲ ತಾಲೂಕಿನಲ್ಲಿ ಕೋಮುವಾದ ಪ್ರಚೋದನೆ, ಬೆದರಿಕೆ, ಗುಂಡಾಗಿರಿ, ಗಲಾಟೆ ಮತ್ತು ಸಾರ್ವಜನಿಕ ಶಾಂತಿಭಂಗದ ಆರೋಪ: ಅಕ್ಷಯ್ ರಾಜಪುತ್ ವಿರುದ್ಧ ವಿಟ್ಲ ಪೊಲೀಸ್ ಇಲಾಖೆ ಶಿಫಾರಸ್ಸಿನ ಮೇರೆಗೆ ಕಂದಾಯ ಇಲಾಖೆ ಬಿಗಿ ನೋಟಿಸ್ ಜಾರಿ!! ಮಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದು ಜಾಗರಣ ವೇದಿಕೆ ಇದರ ವಿರುದ್ಧ ಸುದ್ದಿಗೋಷ್ಠಿ ನಡೆಸಿದೆ!!!

  • 22 Nov 2024 05:12:59 PM

ಬಂಟ್ವಾಳ (19 ನವೆಂಬರ್ 2024): ಹಿಂದೂ ಜಾಗರಣ ವೇದಿಕೆಯ ಪ್ರಮುಖ ಕಾರ್ಯಕರ್ತರಾದ ಅಕ್ಷಯ್ ರಾಜಪೂತ್ ಕಲ್ಲಡ್ಕ ರವರು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗೂಂಡಾಗಿರಿ, ದೊಂಬಿ ಕೋಮು ಪ್ರಚೋದನೆ, ಗಲಭೆ, ಮತ್ತು ಬೆದರಿಕೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ  ಕಂದಾಯ ಇಲಾಖೆ ಬಿಎನ್‌ಎಸ್‌ 130 ಕಲಂ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ. ವಿಟ್ಲ ಪೊಲೀಸ್ ಇಲಾಖೆಯ ಈ ಕ್ರಮವನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಮುಖಂಡರು ಪತ್ರಿಕಾಗೋಷ್ಠಿ ನಡೆಸುದರ ಮೂಲಕ ಆಕ್ರೋಶವನನ್ನು ವ್ಯಕ್ತಪಡಿಸಿದ್ದಾರೆ.

ನೋಟಿಸ್ ಜಾರಿಗೊಳಿಸಿದಲ್ಲದೆ ಕಂದಾಯ ಇಲಾಖೆಯ ಮುಖಾಂತರ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ ಎಂದು ಆರೋಪಿಸಿ, ರೂ 50000 ಬಾಂಡ್ ಸಲ್ಲಿಸಲು ಸೂಚಿಸಿದ್ದಾರೆ.
ಇದು ಕಾಂಗ್ರೆಸ್ ಸರಕಾರದ ಕಪಟತಂತ್ರದ ಭಾಗವೆಂದು ಹೇಳಿದರು. 

ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹಿಂ.ಜಾ.ವೇ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖರು ಈ ವಿಚಾರವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅದಲ್ಲದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರ ವಿರುದ್ಧ ನೋಟಿಸ್ ಕಳುಹಿಸಲಾಗಲಿ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗದ ಅಧಿಕಾರಿಗಳು ಸಂಘಪರಿವಾರದ ಕಾರ್ಯಕರ್ತರನ್ನು ಗುರುತಿಸಿ ನೋಟಿಸ್ ನೀಡುತ್ತಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ ಎಂದು ಆರೋಪಿಸಿದ್ದಾರೆ.

ಕೇರಳಗಡಿಭಾಗಕ್ಕೆ ಅಕ್ರಮವಾಗಿ ಗೋವುಗಳು,ಮರಳು ,ಡ್ರಗ್ಸ್, ಗಾಂಜಾ ಮುಂತಾದವುಗಳ ಸಾಗಾಟ ನಡೆಯುತ್ತಿದ್ದನ್ನು ತಿಳಿಸಿದರೂ ಕೂಡ ಅದಕ್ಕೆ ಸಂಬಂಧಪಟ್ಟ ಕ್ರಮಗಳನ್ನು ರಾಜಕೀಯದ ಒತ್ತಡದಿಂದ ನಡೆಸಲು ಮುಂದಾಗುವುದಿಲ್ಲವೆಂದೂ, ಅದಕ್ಕೆ  ಹೊರತು ಪಡಿಸಿ ಅಕ್ಷಯ್ ರಾಜಪೂತ್ ಅವರಂತಹ  ಹಿಂ.ಜಾ. ವೇ ಕಾರ್ಯಕರ್ತರನ್ನು ಗುರಿಯಾಗಿಸಿ ಇಂತಹ ನೋಟಿಸ್ ಜಾರಿಗೊಳಿಸುವುದು ಅಸಮಾನತೆಯನ್ನು ತೋರಿಸುತ್ತದೆ ಎಂದು ಆಕ್ರೋಷಿತರಾದರು.

ಕಂದಾಯ ಇಲಾಖೆಯಿಂದ ಬಂದ ಈ ನೋಟೀಸನ್ನು ತಕ್ಷಣ ಹಿಂಪಡೆಯ ಬೇಕೆಂದೂ, ಇಂತಹ ನೋಟಿಸ್ ಇನ್ನು  ಯಾವುದೇ ಕಾರ್ಯಕರ್ತರಿಗೆ ನೀಡಿದ್ದಲ್ಲಿ ಉಗ್ರಹೊರತ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಅಕ್ಷಯ್ ರಜಪೂತ್ ಅವರಿಗೆ ನ್ಯಾಯದೊರಕಲು ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಪ್ರಶಾಂತ್ ಕೆಮ್ಲುಗುಡೆ, ನರಸಿಂಹ ಮಾಣಿ, ರಾಜೇಶ್ ಬೊಳ್ಳುಕಲ್ಲು, ಸಮಿತ್ ರಾಜ್ ದಾರೆಗುಡ್ಡೆ, ತಿರುಳೇಶ್ ಪೊಳಳಿ ಉಪಸ್ಥಿತರಿದ್ದರು.
ಈ ಘಟನೆಯು ಹಿಂದು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಸಂಚು ಎಂಬುದಾಗಿ ಅಭಿಪ್ರಾಯಪಟ್ಟರು.