ವಿಟ್ಲ :ಪಶು ಚಿಕಿತ್ಸೆ ಕೇಂದ್ರದ ಆವರಣದಲ್ಲಿರುವ ತೀರಾ ಇಕ್ಕಟ್ಟಾದ ರಸ್ತೆಯ ಕಾಂಕ್ರೀಟೀಕರಣಕ್ಕೆ 6 ಲಕ್ಷ ರೂಪಾಯಿ ಅನುದಾನ ಮಂಜೂರಾಗಿತ್ತು. ಈ ಕಾಮಗಾರಿಗೆ ಸಂಬಂಧಿಸಿದಂತೆ ಬೆಳಗ್ಗೆ ಜೆಸಿಬಿ ವಾಹನ ಸ್ಥಳಕ್ಕೆ ತಲುಪಿದ್ದು, ಆವರಣದ ಗೋಡೆಯನ್ನು ಅಶ್ರಫ್ ಅವರು ಧ್ವಂಸ ಮಾಡಿದರು.
ಪಶು ಚಿಕಿತ್ಸಾಲಯದ ವೈದ್ಯ ಡಾ. ಪರಮೇಶ್ವರ ನಾಯಕ್ ಪ.ಪಂ ಮುಖ್ಯಾಧಿಕಾರಿಗೆ ಈ ಕುರಿತು ದೂರು ನೀಡಿದ್ದರು. ಸ್ಥಳೀಯರು ಮತ್ತು ಹಿಂದೂ ಜಾಗರಣ ವೇದಿಕೆ ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿದ್ದು,ಸರ್ಕಾರದ ಆಸ್ತಿಯನ್ನು ಹಾನಿ ಮಾಡುವುದು ಕಾನೂನು ಬಾಹಿರ ಅದನ್ನು ಮುಟ್ಟವ ಹಕ್ಕು ಯಾರಿಗೂ ಇಲ್ಲ ಎಂದು ದ್ವಂಸ ಗೊಂಡ ಆವರಣದ ಪುನರ್ನಿರ್ಮಾಣ ಮಾಡಿ ಕೊಡಬೇಕೆಂದು ಖಂಡನೆ ವ್ಯ್ತಪಡಿಸಿದ್ದರು.
ಖಂಡನೆಗೆ ತಕ್ಕಂತೆ ಸಂಜೆಯೊಳಗಡೆ ಪ.ಪಂ ನ ನಿರ್ದೇಶದಂತೆ ವಿಟ್ಲ ಪೊಲೀಸ್ ಠಾಣೆಯ ಆದೇಶದಂತೆ ದ್ಟಂಸಗೊಂಡ ಪಶು ಚಿಕತ್ಸಾಲಯದ ಆವರಣದ ಗೋಡೆಯನ್ನು ನಿರ್ಮಿಸಿ ಕೊಟ್ಟಿದಾರೆ.