ಅಡ್ಯನಡ್ಕ ವಿನಾಯಕ ಬೇಕರಿಯ ಮೇಲೆ ಎಫ್ ಎಸ್ ಎಸ್ ಎ ಐ ಯಿಂದ ಮಿಂಚಿನ ಧಾಳಿ: ಇಂತಹ ಬೇಕರಿಗಳನ್ನು ಬಂದ್ ಮಾಡಿಸಬೇಕೆಂಬುದು ಸಾರ್ವಜನಿಕ ಅಭಿಪ್ರಾಯ!!! ಅಷ್ಟಕ್ಕೂ ಅಲ್ಲಿ ನಡೆದದ್ದರೂ ಏನು??? ಹಾಳಾದ ಸಿಹಿತಿಂಡಿ,ಮಾದಕವಸ್ತುಗಳ ಮಾರಾಟ ಮಾತ್ರ ಅಗತ್ಯ ಪರವಾನಿಗೆಯ ನವೀಕರಣವು ಇಲ್ಲ...!!

  • 22 Nov 2024 08:09:07 PM

ಅಡ್ಯನಡ್ಕ: ಅಡ್ಯನಡ್ಕ ಮೇಗಿನ ಪೇಟೆಯಲ್ಲಿರುವ ಶ್ರೀ ವಿನಾಯಕ ಬೇಕರಿಗೆ ಇಂದು ಮಧ್ಯಾಹ್ನದ ವೇಳೆ ಎಫ್ ಎಸ್ ಎಸ್ ಎ ಐ ಅಧಿಕಾರಿಗಳಿಂದ ಧಾಳಿ ನಡೆಯಿತು. ಈ ಧಾಳಿಯಲ್ಲಿ ಹಾಳಾಗಿದ್ದ ಸಿಹಿತಿಂಡಿಗಳು, ಗುಟ್ಕಾ ಮಾದಕ ವಸ್ತುಗಳು, ಹಾಗೂ ತೊಂದರೆಯಾದ ತಿನಿಸುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಆರೋಪದ ನಿಜವಾಸ್ತೆ ಬಯಲಾಯಿತು. 

 

ಕಾಟುಕುಕ್ಕೆ ನಿವಾಸಿಯದ ಚಂದ್ರಶೇಖರ ಈ ಬೇಕರಿಯ ಮಾಲಕ. ಈತ ಸತತ 12 ವರುಷ ಗಳಿಂದ ಅಗತ್ಯ ಪರವಾನಿಗೆಯನ್ನು ನವೀಕರಿಸದೆ ಕೇಪು ಗ್ರಾಮಪಂಚಾಯತನ್ನು ನಿರ್ಲಕ್ಷ್ಯವಿಟ್ಟು ನಿರಾದಾರವಾಗಿ ವ್ಯಾಪಾರ ನಡೆಸುತ್ತಿದ್ದನು. ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡುವ ಈ ಅಂಗಡಿಗೆ ಹಲವು ಭಾರಿ ಧಾಳಿಯಾಗಿತ್ತು. ಆದರೂ ಬುದ್ದಿಕಲಿಯದ ನಿರ್ದಕ್ಷಿಣ್ಯನಾದ ಆತನ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

*ಮುಂದಿನ ದಿನಗಳಲ್ಲಿ ಅಂಗಡಿ ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಸಾರ್ವಜನಿಕರು ತಮ್ಮ ಕಠಿಣ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.* ಗ್ರಾಮ ಮತ್ತು ಕಾಲೇಜು-ಪಾಠಶಾಲೆಗಳ ಹತ್ತಿರ ಇರುವ ಈ ಅಂಗಡಿಯ ವಸ್ತುವಿನ ಬಳಕೆಯಿಂದ ಗ್ರಾಹಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿದೆ ಎಂದು ನಾಗರಿಕರು ದೂರು ಸಲ್ಲಿಸಿದ್ದಾರೆ.

 

ಶಾಲಾ ಕಾಲೇಜುಗಳ ಹತ್ತಿರವಿರುವ ಈ ಅಂಗಡಿಯಲ್ಲಿ ಗುಟ್ಕಾ ತರಹದ ಮಾದಕವಸ್ತುಗಳ ಮಾರಾಟ ಶಾಲಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂದು ಇಂತಹ ತಪ್ಪಿಗೆ ತಕ್ಕದಾದ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.