ಹಿಂದೂ ರಿಪಬ್ಲಿಕ್ :- ಕಾಮಕ್ಕೆ ಕಣ್ಣಿಲ್ಲ ಅನ್ನುವ ಮಾತು ನೀವು ಕೇಳಿರಬಹುದು ಆ ಮಾತನ್ನು ಪುಷ್ಟಿಕರಿಸುವ ಘಟನೆಯೊಂದು ಇದೀಗ ಪುತ್ತೂರಿನಲ್ಲಿ ನಡೆದಿದೆ. ಇಂದೋ ನಾಳೆಯೋ ಸಾಯುವಂತಿದ್ದ 70 ವರ್ಷದ ಮುದುಕನೊಬ್ಬ ತನ್ನ ಮೊಮ್ಮಗಳ ಪ್ರಾಯದ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಅಸ್ವಸ್ಥಗೊಳಿಸಿದ್ದಾನೆ. ಆರೋಪಿಯನ್ನು ಪುತ್ತೂರು ಮೂಲದ ಪ್ರಸ್ತುತ ಮುದುಂಗಾರುಕಟ್ಟೆ ನಿವಾಸಿ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.
ಆಟವಾಡುತ್ತಿದ್ದ ಮಗುವಿನ ಮೇಲೆರಗಿದ ಅಬ್ದುಲ್ಲಾ!
ಉಳ್ಳಾಲ ತಾಲೂಕಿನ ಬಾಳೆಪುಣಿಯ ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ ಕಣ್ಣಿಟ್ಟ ಕಾಮುಕ ಅಬ್ದುಲ್ಲ ಕಂದಮ್ಮನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದಾಗಿ ಮಗು ತೀವ್ರವಾಗಿ ಅಸ್ವಸ್ಥಗೊಂಡಿದೆ.
ಅಬ್ದುಲ್ಲಾ ಅರೆಸ್ಟ್!
ಲೈಂಗಿಕ ಕಿರುಕುಳದಿಂದ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಾಗ ಅಬ್ದುಲ್ಲಾನ ಕಾಮಪುರಾಣ ಹರಾಜಾಗಿದೆ. ವಿಚಾರ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೋಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಅಬ್ದುಲ್ಲಾನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.