ರಿಪಬ್ಲಿಕ್ ಹಿಂದೂ:- ಇತಿಹಾಸವನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ. ಅಲ್ಲದೆ ಚರಿತ್ರೆಗೆ ಸುಳ್ಳಿನ ಲೇಪವನ್ನೂ ಅಂಟಿಸುವುದು ಕೂಡಾ ಕೈಲಾಗದ ಮಾತು. ಈ ಭರತ ಭೂಮಿಯಲ್ಲಿ ನಡೆದ ಅದೆಷ್ಟೋ ನೈಜ ಘಟನೆಗಳನ್ನು ಆಧರಿಸಿ ಸಿನಿಮಾವಾಗಿ ರೂಪಿಸಲಾಗಿದೆ. ಹಿಂದುತ್ವ, ದೇಶದ ರಾಜಕೀಯ, ಸೇನೆ ಹೀಗೆ ಅದೆಷ್ಟೋ ಸನಾತನ ಸಂಸ್ಕೃತಿಯ ಕಂಪಿರುವ ನೈಜ ವಿಚಾರಧಾರೆಗಳನ್ನು ಆಧರಿಸಿ ಸುಮಾರು ಚಲನಚಿತ್ರಗಳು ರೂಪಿತಗೊಂಡಿವೆ. ಅದೇ ರೀತಿಯ ಐತಿಹ್ಯ ಆಧಾರಿತ ಒಂದು ಅರ್ಥಪೂರ್ಣ ಸಿನಿಮಾವನ್ನು ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಪಕ್ಷದ ಇತರ ಕಾರ್ಯಕರ್ತರೊಂದಿಗೆ ವೀಕ್ಷಿಸಿದ್ದಾರೆ.
ಹೌದು. ಗೋಧ್ರಾ ರೈಲು ದುರಂತವನ್ನು ಆಧರಿಸಿ ನಿರ್ಮಾಣಗೊಂಡಿರುವ ದಿ ಸಬರಮತಿ ರಿಪೋರ್ಟ್ ಸಿನಿಮಾವನ್ನು ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನಗರದ ಭಾರತ್ ಚಿತ್ರಮಂದಿರದಲ್ಲಿ ಕೂತು ವೀಕ್ಷಿಸಿದ್ದಾರೆ. ಮಾನಸಿಕವಾಗಿ ಮತ್ತು ಸಮಾಜದ ಮೇಲೆ ಉತ್ತಮ ರೀತಿಯಲ್ಲಿ ಪ್ರಭಾವ ಬೀರುವ ಅತ್ಯಂತ ಅರ್ಥಪೂರ್ಣ ಸಿನಿಮಾವನ್ನು ರಾಜಕೀಯ ಮುಖಂಡರು ಆಗಾಗ ವೀಕ್ಷಿಸುತ್ತಿರುತ್ತಾರೆ.
ಸಿನಿಮಾ ವೀಕ್ಷಿಸಿದ ಬಳಿಕ ಸಂಸದ ಚೌಟ ಹೇಳಿದ್ದೇನು ಗೊತ್ತಾ..?
ಶತಮಾನಗಳ ಹಿಂದೆ ಗತಿಸಿ ಹೋದ ಘಟನೆಯ ಕುರಿತು ಅದ್ಭುತವಾಗಿ ತಿಳಿಸುವ ಈ ಸಿನಿಮಾವನ್ನು ನಾನು ವೀಕ್ಷಿಸಲು ದೇಶದ ಪ್ರಧಾನಿ ನರೇಂದ್ರ ಮೋದಿಯವರು ನೇರ ಕಾರಣ.ಏಕೆಂದರೆ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಇದು ನನ್ನ ಮೇಲೆ ಪ್ರಭಾವ ಬೀರಿತು. ಆದ್ದರಿಂದ ನನ್ನ ಕಾರ್ಯಕರ್ತರೊಂದಿಗೆ ಬಂದು ಸಿನಿಮಾ ನೋಡಿದೆ. ಮತೀಯ ಸಂಚಿನ ಹಿಂದಿನ ಸತ್ಯ ಸಿನಿಮಾ ರೂಪದಲ್ಲಿ ಹೊರಬಂದಿದೆ. ಈ ಚಿತ್ರ ಸತ್ಯದ ಮೇಲೆ ಪರಾಕ್ರಮ ಮಾಡುವ ರಾಜಕೀಯ ಹುನ್ನಾರದ ಬಣ್ಣ ಬಯಲು ಮಾಡಿದೆ. ಪ್ರತಿಯೊಬ್ಬರೂ ನೋಡಬೇಕಾದ ಅದ್ಭುತ ಸಿನಿಮಾವಿದು ಎಂದು ಅಭಿಪ್ರಾಯಪಟ್ಟರು. ಇನ್ನು ಕ್ಯಾ. ಚೌಟ ಅವರ ಜೊತೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಪದಾಧಿಕಾರಿಗಳು, ಮನಪಾ ಸದಸ್ಯರು ಭಾಗಿಯಾಗಿದ್ದರು.