ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದು ಮೂದಲಿಸಿದ ವಿದ್ಯಾರ್ಥಿ| ಕ್ರಮ ತಗೊಳ್ಳಿ ಎಂದ ಸಚಿವನ ನಡೆಗೆ ಬಿಜೆಪಿ ಕೆಂಡಾಮಂಡಲ..!

  • 24 Nov 2024 01:12:35 PM

ರಿಪಬ್ಲಿಕ್ ಹಿಂದೂ:- ಕಾಂಗ್ರೆಸ್ ಅಧಿಕಾರದ ಗದ್ದುಗೆಯೇರಿದ ಮೇಲೆ ಸರ್ವಾಧಿಕಾರಿ ಧೋರಣೆಯನ್ನು ನಡೆಸುತ್ತಾ ಬಂದಿದೆ. ಕೋಟಿ ಹಗರಣಗಳಲ್ಲಿ ಸಿಲುಕಿಕೊಂಡರೂ ಅಹಂಕಾರ ಮಾತ್ರ ಇನ್ನೂ ತಗ್ಗಿಲ್ಲ.‌ ಕಾಂಗ್ರೆಸ್ ನಾಯಕರು ಸುಮಾರಷ್ಟು ಕ್ಲೀಷೆಯ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇವರ ಅಸಂಬದ್ಧ ವರ್ತನೆಗಳಿಂದ ಬಿಜೆಪಿ ಟೀಕೆಗೈಯ್ಯಲು ಆಹಾರವಾಗುತ್ತಲೇ ಇರುತ್ತಾರೆ. ಇದೀಗ ಮತ್ತೆ ಕಾಂಗ್ರೆಸ್ಸಿನ ಸಚಿವರೋರ್ವರು ವಿದ್ಯಾರ್ಥಿಯ ನಿಂದನೆಗೆ ಪಾತ್ರರಾಗಿದ್ದಾರೆ. 

 

ಬುಧವಾರ ವಿಧಾನಸೌಧದಲ್ಲಿ ನಡೆದ ಕೋಚಿಂಗ್ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಓರ್ವ ವಿದ್ಯಾರ್ಥಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರಲ್ಲ ಎಂದು ಹೇಳಿ ಅವಮಾನಿಸಿದ್ದಾನೆ. ಇದರಿಂದ ಕೋಪಗೊಂಡ ಸಚಿವ ಅವನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಖಡಕ್ ಆದೇಶ ನೀಡಿದ್ದಾರೆ. 

 

ಕಾರ್ಯಕ್ರಮದಲ್ಲಿ ನಡೆದಿದ್ದೇನು..? 

 

ಕಾರ್ಯಕ್ರಮದಲ್ಲಿ ಸಚಿವರು, ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅಭಿಪ್ರಾಯವನ್ನು ಪಡೆದುಕೊಳ್ಳಲು ಮುಂದಾಗಿದ್ದರು. ಈ ಸಂದರ್ಭ ಆನ್ಲೈನ್ ನಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡನೇ ಬರಲ್ಲ ಎಂದು ಟೀಕಿಸಿದ್ದಾನೆ. ಆರಂಭದಲ್ಲಿ ಈ ಹೇಳಿಕೆಯನ್ನು ಲಘುವಾಗಿ ತೆಗೆದುಕೊಂಡ ಸಚಿವರು ನಂತರ ಏಕಾಏಕಿ ಗರಂ ಆಗಿದ್ದಾರೆ. ಈಗ ನಾನು ಕನ್ನಡದಲ್ಲಿ ಅಲ್ಲದೆ ಮತ್ತೇನು ಉರ್ದುವಿನಲ್ಲಿ ಮಾತಾಡಿದ್ನಾ...ಯಾರದು ಹೇಳಿದ್ದು..? ಆ ವಿದ್ಯಾರ್ಥಿಯನ್ನು ಸುಮ್ಮನೆ ಬಿಡಬೇಡಿ. ಕ್ರಮ ತೆಗೆದುಕೊಳ್ಳಿ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಸೂಚನೆ ನೀಡಿದ್ರು.

 

ಇದ್ದದ್ದನ್ನು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಹೊಡೆದಂತೆ: ಬಿಜೆಪಿ

 

ಸಚಿವರ ಈ ನಡೆಗೆ ತೀವ್ರವಾಗಿ ವಿರೋಧಿಸಿದ ಬಿಜೆಪಿ ಟ್ವಿಟರ್ ನಲ್ಲಿ ` ಆ ವಿದ್ಯಾರ್ಥಿ ಹೇಳಿದ್ದು ಅಕ್ಷರಶಃ ಸತ್ಯ. ಮಧು ಬಂಗಾರಪ್ಪ ಅವಿದ್ಯಾವಂತ ಸಚಿವ. ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಸ್ವತಃ ಸಚಿವರೇ ಈ ಹಿಂದೆ ಹೇಳಿಕೆ ನೀಡಿದ್ದರು. ಈಗ ಅದೇ ಸತ್ಯ ಹೇಳಿದ ಬಾಲಕನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಆದೇಶಿಸಿರೋದು ನಾಚಿಗೇಡು ಎಂದು ವ್ಯಂಗ್ಯವಾಡಿದೆ.