ದತ್ತಪೀಠ: ಹಿಂದೂ ಧಾರ್ಮಿಕ ದತ್ತ ತಪೋಸ್ಥಳ ದ ಹಕ್ಕಿಗಾಗಿ ತೀವ್ರ ಹೋರಾಟ!!! ದತ್ತ ಜಯಂತಿ ಹಬ್ಬ ಸಂಭ್ರಮಾಚರಣೆ ಹೋರಾಟ ಡಿಸೆಂಬರ್ 6 ರಿಂದ 14 ರ ವರೆಗೆ.!!!

  • 24 Nov 2024 07:30:04 PM

ಚಿಕ್ಕಮಂಗಳೂರು: ದತ್ತಪೀಠ ವಿವಾದವು  ಹಿಂದೂ ಸಮುದಾಯದ ಪರಂಪರೆ ಮತ್ತು ಧಾರ್ಮಿಕತೆಯ ಕೇಂದ್ರವಾಗಿದೆ.  ಈ ಸ್ಥಳದಲ್ಲಿ ಶ್ರೀಗುರು ದತ್ತಾತ್ರೇಯರು ತಪಸ್ಸು ಮಾಡುತ್ತಿದ್ದರು ಎಂಬುದಾಗಿ ಇತಿಹಾಸ ಹೇಳುತ್ತದೆ. ಹಾಗೆಯೇ  ಈ ಸ್ಥಳ ಪೂರ್ವಜರ ಕಾಲದಿಂದಲೂ ದತ್ತಾತ್ರೇಯ ತಪೋಸ್ಥಳವೆಂದು ಪ್ರಸಿದ್ದಿ ಪಡೆದಿತ್ತು.ಆದ್ದರಿಂದ ಈ ಜಾಗವು ಹಿಂದೂಗಳ ಪವಿತ್ರ ತೀರ್ಥಕೇಂದ್ರವಾಗಬೇಕು ಎಂಬುದು ಹಿಂದೂ ಸಂಘಟನೆಗಳ ಒತ್ತಾಯವಾಗಿದೆ. ದತ್ತಜಯಂತಿ ಹಬ್ಬದ ಹಿನ್ನೆಲೆಯಲ್ಲಿ, ಈ ಪ್ರದೇಶದ ಮೇಲೆ ಹಿಂದೂ ಸಮುದಾಯವು ಇದು ನಮ್ಮ ಧಾರ್ಮಿಕ ಸ್ಥಳ ಎಂದು ಸ್ಪಷ್ಟೀಕರಿಸಲು ಬಲವಾದ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಗೋರಿಗಳ ಮೇಲೆ ಕುಂಕುಮ ಹಚ್ಚಿದ ವಿಚಾರವು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ, ಹಿಂದೂ ಮುಖಂಡರು ಇದು ಅವರ ಧಾರ್ಮಿಕ ಹಕ್ಕಿನ ಅಂಗವೆಂದು ಸಮರ್ಥಿಸಿದ್ದಾರೆ.

ಇತಿಹಾಸ ಮತ್ತು ಧಾರ್ಮಿಕ ಪರಂಪರೆಯ ಆಧಾರದ ಮೇಲೆ ಈ ಭೂಮಿ ನಮ್ಮ ಧಾರ್ಮಿಕ ಸ್ಥಳವಾಗಬೇಕೆಂದು ಹೋರಟ ಮಾಡುತಿದ್ದೇವೆ . ಈ ಜಾಗವು ಹಿಂದೂಗಳ ಹಕ್ಕಿನ ಭಾಗವಾಗಿದೆ ಮತ್ತು ಸರಕಾರವು ಇದು ಹಿಂದೂ ಧಾರ್ಮಿಕ ಸ್ಥಳ ಎಂದು ಅಧಿಕೃತವಾಗಿ ಗುರುತಿಸಬೇಕು ಎಂದು ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್ ಈ ವಿವಾದವನ್ನು ಎಂಟು ವಾರಗಳಲ್ಲಿ ಬಗೆಹರಿಸಲು ಆದೇಶ ನೀಡಿದರೂ, ರಾಜ್ಯ ಸರ್ಕಾರವು ಇದಕ್ಕೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹಿಂದೂ ಸಮುದಾಯವು ಡಿಸೆಂಬರ್ 6 ರಿಂದ 14 ರವರೆಗೆ ನಡೆಯಲಿರುವ ದತ್ತಜಯಂತಿಯನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟದ ದೃಷ್ಟಿಯಿಂದ ಆಚರಿಸಲಿದೆ.ಇದರಿಂದ, ಹಿಂದೂ ಸಮುದಾಯವು ತಮ್ಮ ಪರಂಪರೆಯನ್ನು ಮತ್ತು ಧಾರ್ಮಿಕತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದೂ, ಈ ಹಬ್ಬಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.