ಪೆರ್ಲ : ಈಕೆ ವೃತ್ತಿಯಲ್ಲಿ ಸರಕಾರಿ ಅನುದಾನಿತ ಶಾಲೆಯಲ್ಲಿ ಅಧ್ಯಾಪಿಕೆ. ಪ್ರವೃತ್ತಿಯಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಡಿವೈಎಫ್ಐ ನಾಯಕಿಯಾದ ಈಕೆಯ ಹೆಸರು ಸಚಿತಾ ರೈ. ಇತ್ತೀಚೆಗೆ ಉದ್ಯೋಗ ದೊರಕಿಸಿಕೊಡೋದಾಗಿ ನಂಬಿಸಿ ಬಡಯುವತಿಯೋರ್ವಳಿಂದ ಲಕ್ಷಾಂತರ ರೂ. ಪಂಗನಾಮ ಹಾಕಿದ ಘಟನೆಗೆ ಸಂಬಂಧಿಸಿ ದೂರು ದಾಖಲಾಗಿತ್ತು. ಮೊದಲೇ ಈ ಬಗ್ಗೆ ಆರೋಪವಿದ್ದರೂ ದೂರು ದಾಖಲಾಗುತ್ತಲೇ ಈಕೆಯನ್ನು ಪಕ್ಷದಿಂದಲೇ ಹೊರಹಾಕಲಾಗಿದೆ.ಆರೋಪಕ್ಕೆ ಒಳಗಾಗಿರುವ ಸಚಿತಾ ರೈ ಅವರು ವಿವಾಹದ ಬಳಿಕ ಪಕ್ಷದ ಹುದ್ದೆಯಲ್ಲಿ ಇಲ್ಲ ಎಂದು ಕಮ್ಯುನಿಸ್ಟ್ ಪಕ್ಷದ ನೇತಾರರು ತಿಳಿಸಿದ್ದಾರೆ.ಹಾಗಿದ್ದರೇ ಈಗ ಆರೋಪ ಕೇಳಿ ಬಂದಾಗ ಪಕ್ಷದಿಂದ ವಜಾಗೊಳಿಸುದುದೇಕೆನ್ನೋದಕ್ಕೆ ಉತ್ತರವಿಲ್ಲ.!
ಈಕೆಯ ಮುಖ್ಯವಾದ ಕೆಲಸ ಎಂದರೇ ಹಿಂದೂ ಪರ ಕಾರ್ಯಕರ್ತರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಿಂದುತ್ವ ವಿರೋಧಿ ಕಮೆಂಟ್ಸ್ ಹಾಕೋದು ಮತ್ತು... ಹಿಂದುಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದೂರು ನೀಡುವುದು ಹಾಗೂ ಅದರಿಂದ ಪ್ರಚಾರ ಪಡೆಯೋದು.....!!
ಗೋವುಗಳನ್ನು ಪೂಜೆ ಮಾಡುವ ಪವಿತ್ರವಾದ ಸಮಾಜದಲ್ಲಿ ಹುಟ್ಟಿರುವ ಇವರಳು ಪ್ರಚಾರಕ್ಕಾಗಿ ಬೀಫ್ ಆಹಾರ ಪದ್ಧತಿ ಹಾಗೂ ಇವುಗಳು ಬಹಳ ರುಚಿಕರವಾಗಿದೆ ಎಂದೆಲ್ಲಾ ಪೋಸ್ಟ್ ಹಾಕುತ್ತಿದ್ದಳು...
ಲವ್ ಜಿಹಾದ್ ನಡೆಯುತ್ತಿದೆ ಅಂತ ಕೇರಳದ ಹೈಕೋರ್ಟ್ ಒಪ್ಪಿದರೂ ಇವರು ಅದನ್ನು ಒಪ್ಪಲು ತಯಾರಿಲ್ಲ. ಹಿಂದೂ ಯುವತಿಯರು ಅನ್ಯಮತೀಯ ಯುವಕರನ್ನು ಮದುವೆಯಾದರೆ ಅಂತಹ ದಂಪತಿಗಳಿಗೆ ಬೇಜಾನ್ ಬೆಂಬಲ. ಮಾತ್ರವಲ್ಲದೆ ಸ್ವಯಂ ಬುರ್ಕಾಧರಿಸಿ ಬೆಂಬಲ..
ಸಾಮಾಜಿಕ ಜಾಲತಾಣವೇ ರಾಜಕೀಯ ಎಂದವಳು ಇಂದು 15 ಲಕ್ಷ ರೂ. ಲೂಟಿ ಮಾಡಿದ ಆರೋಪಕ್ಕೆ ಒಳಗಾಗಿ ಪೊಲೀಸ್ ಸ್ಟೇಷನ್ ಕೋರ್ಟ್ ಗೆ ಹತ್ತಿ ಇಳಿದು ಮಾಡುತ್ತಿದ್ದಾಳೆ..
ಹಿಂದೂಪರ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಸುಳ್ಳುದೂರು ದಾಖಲಿಸಿ ವಿಕೃತ ಆನಂದ ಪಡೆಯುತ್ತಿದ್ದ ಸಚಿತ ರೈ ಅವರಿಗೆ ಆ ಭಗವಂತ ಸ್ವಯಂ ತೋರಿಸುವ ವಿಧಿ ಎಂದು ಸಂಭ್ರಮ ಆಚರಿಸುತ್ತಿರುವ ಕಾಸರಗೋಡು ಹಿಂದು ಹುಲಿಗಳು...
15 ಲಕ್ಷ ರೂ. ಅಲ್ಲದೆ ಬೇರೆ ಬೇರೆ ಕಡೆಯಿಂದ ಉದ್ಯೋಗ ನೀಡುವುದಾಗಿ ನಂಬಿಸಿ ಹಣ ದೋಚಿರುವುದಾಗಿ ದೂರು ದಾಖಲಾಗುತ್ತಿದೆ. ಈಕೆಯ ಮಾತು ನಂಬಿ ಹಣ ನೀಡಿ ವಂಚಿಸಲ್ಪಟ್ಟ ಯುವತಿಯರು ಹಿಡಿಶಾಪ ಹಾಕುತ್ತಿದ್ದಾರೆ.
ಸಚಿತಾ ರೈ ಅವರಿಂದ ಸಾಮಾಜಿಕ ಬದ್ಧತೆಯ ಧಮನ ಅವರ ರಾಜಕೀಯ ಜೀವನದ ಫುಲ್ ಸ್ಟಾಪ್ ಹಾಗೂ ರಾಜ್ಯಕ್ಕೆ ಇವರು ಅನ್ಫಿಟ್ ಎಂದು ಕಾಸರಗೋಡಿನ ಜನರ ಅಭಿಪ್ರಾಯ..