ತುಳುನಾಡಿನ ದೈವ ದೇವರ ಜಾಗ ಉಳಿಸಲು ಹೋರಾಟದ ನಾಯಕತ್ವ ವಹಿಸಿದ ಕ್ಯಾಪ್ಟನ್!; ಸಂಸದ ಬ್ರಿಜೇಶ್ ಚೌಟ ಹೊಸ ಅಧ್ಯಾಯ!

  • 25 Nov 2024 10:56:36 AM

ರಿಪಬ್ಲಿಕ್ ಹಿಂದೂ:- ರಾಜ್ಯದಲ್ಲಿ ವಕ್ಫ್ ವಿವಾದ ಇದೀಗ ಅನೇಕ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಲವ್ ಜಿಹಾದ್ ರೀತಿ ಇದು ಕೂಡಾ ಒಂದು ರೀತಿಯ ಲ್ಯಾಂಡ್ ಜಿಹಾದ್ ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ವಿರೋಧವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೊಇಗ ಮಂಗಳೂರಿನಲ್ಲಿ ಕೂಡಾ ಈ ವಿವಾದ ಭುಗಿಲೆದ್ದಿದೆ.

ನಮ್ಮ ಭೂಮಿ ನಮ್ಮ ಹಕ್ಕು- ಘೋಷಣೆ ಕೂಗಿ ಪ್ರತಿಭಟನೆ

ವಕ್ಫ್ ಬೋರ್ಡ್‌ ಕಬಳಿಸಿದ ಆಸ್ತಿಯನ್ನು ಮರು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ “ನಮ್ಮ ಭೂಮಿ ನಮ್ಮ ಹಕ್ಕು’ ಘೋಷವಾಕ್ಯದಡಿ ಬಿಜೆಪಿ ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಪುರಭವನ ಮುಂಭಾಗದ ರಾಜಾಜಿ ಪಾರ್ಕ್ ಬಳಿ ಇರುವ ಗಾಂಧಿ ಪ್ರತಿಮೆಯಡಿ ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಬೃಹತ್‌ ಧರಣಿ ಸತ್ಯಾಗ್ರಹ ನಡೆಯಿತು.

ಈ ಬಗ್ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದೇನು ಗೊತ್ತಾ...?

ಸಂಸದ ಬ್ರಿಜೇಶ್‌ ಚೌಟ ಮಾತನಾಡಿ, ಹಿಂದೂ ಧರ್ಮ, ತುಳುನಾಡಿನ ದೈವ ದೇವರ ಜಾಗ ಉಳಿಸಲು ಹಾಗೂ ರಾಜ್ಯದಲ್ಲಿರುವ ಟಿಪ್ಪು ಮಾದರಿ ಆಡಳಿತಕ್ಕೆ ಮುಕ್ತಾಯ ಬರೆಯಲು ಬಿಜೆಪಿ ಅವಿರತ ಹೋರಾಟ ನಡೆಸಲಿದೆ. ಲ್ಯಾಂಡ್‌ ಜೆಹಾದ್‌ಗೆ ಪ್ರೋತ್ಸಾಹ ನೀಡುತ್ತಿರುವ ಕಾಂಗ್ರೆಸ್‌ ವಿರುದ್ಧ ಜನಜಾಗೃತಿ ಮೂಡಿಸಲು ಬಿಜೆಪಿ ಶಕ್ತವಾಗಿದೆ ಎಂದರು.
ಜಮೀರ್‌ ಖಾನ್‌ ಎಲ್ಲ ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಿ ವಕ್ಫ್ಗೆ ಭೂಮಿ ಸ್ವಾಧೀನ ಮಾಡುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಟಿಪ್ಪು   ಅನುಷ್ಠಾನ ವಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಮನೆ ಮನೆಗೆ ಭೇಟಿ ನೀಡಿ ಆರ್‌ಟಿಸಿ ಪರಿಶೀಲಿಸಲಿದೆ ಎಂದರು. ಇನ್ನು ಬೆಂಗಳೂರಿನಲ್ಲಿ ವಕ್ಫ್ ಹೆಸರಿನಲ್ಲಿ ಕಟ್ಟಡಗಳು ಇವೆ. ಅದರ ಹಣ ಯಾರಿಗೆ ಹೋಗಿದೆ? ವಕ್ಫ್ ಭೂಮಿಯನ್ನು ವಾಣಿಜ್ಯಕ್ಕೆ ಬಳಸಲು ಅವಕಾಶ ಇದೆಯೇ? ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದರ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.