ಮಾಣಿಲ: ಕೊಡಗಿನ ಯುವತಿಯೋರ್ವಳು *ತಾನು ಹಿಂದು ಎಂದು ನಂಬಿಸಿ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕಕಕ್ಕೆ ಪ್ರೇರೇಪಿಸಿ ವಂಚನೆ ಮತ್ತು ಅತ್ಯಾಚಾರ ಮಾಡಿದರೆಂದು ಬಂಟ್ವಾಳ ತಾಲೂಕಿನ ವಾಲ್ಟರ್ ಡಿಸೋಜ ಎಂಬಾತನ ವಿರುದ್ಧ ದೂರು ನೀಡಿದ್ದಾರೆ.* ಅದಲ್ಲದೆ ಅವರು ನಾನು 2016 ರಿಂದ ಈ ವಂಚನೆಗೆ ಒಳಪಟ್ಟಿದೇನೆಂದೂ, ಈ ವಿಷಯ ಇತ್ತೀಚೆಗೆ ಆತನ ತಂಗಿಯ ಮುಖಾಂತರ ಅವನು ಹಿಂದೂ ಅಲ್ಲ ಕ್ರಿಶ್ಚನ್ ಎಂಬ ವಂಚನೆಯ ಸತ್ಯ ಅರಿತೆ ಎಂದು ಹೇಳಿಕೊಂಡಿದ್ದಾರೆ.
ಆರೋಪಿಯು ನಕಲಿ ಗುರುತು ಪತ್ರಗಳನ್ನು ಬಳಕೆಯಿಂದ, ಹೋಟೆಲ್ ರೂಮ್‌ಗಳಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದೂ, ಇತ್ತೀಚೆಗೆ ಆಕೆಯ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡುವ ಪ್ರಯತ್ನ ಮಾಡಿದ್ದಾನೆಂದೂ, ಮತ್ತು ಅವರ ಸ್ನೇಹಿತರನ್ನು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಕಾನೂನು ತಿಳುವಳಿಕೆ ಇಲ್ಲದ ಕಾರಣ ತಡವಾಗಿ ತಮ್ಮ ಹಿತೈಷಿಗಳ ಸಹಾಯದಿಂದ ದೂರು ಸಲ್ಲಿಸಿರುತ್ತಾರೆ. ಅವರು ತಮ್ಮ ಬಳಿ ಇರುವ ಎಲ್ಲಾ ಸಾಕ್ಷ್ಯಧಾರಗಳನ್ನು ದೂರಿನ ಜೊತೆ ಪಾಂಡೇಶ್ವರ ಪೋಲಿಸ್ ಠಾಣೆಗೆ ಹಸ್ತಾಂತರಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಇಂತಹ ಕೃತ್ಯಗಳು ಇನ್ನು ನಡೆಯಬಾರದು ಎಂದಾದರೆ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆ - ಕ್ರಮ ಕಾಮಿಗಳಿಗೆ ಇಂತಹ ಯೋಚನೆ ಯಾವತ್ತೂ ಬಾರದಂತಿರ ಬೇಕೆಂದು ಹಿಂದೂ ಬಾಂಧವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ