ಟೋಲ್ ಗೇಟ್ ನಲ್ಲಿ ಮಹಿಳೆಯ ಮೇಲೆ ಕೈ ಮಾಡಿದ ಕಾಂಗ್ರೆಸ್ ಮುಖಂಡ!;ವೈರಲ್ ಆಗುತ್ತಿದೆ ಹಲ್ಲೆ ನಡೆಸಿದ ಫೋಟೋ!

  • 26 Nov 2024 01:53:40 PM

ರಿಪಬ್ಲಿಕ್ ಹಿಂದೂ:- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕೈಗೆತ್ತಿಕೊಂಡ ಮೇಲೆ ಇವರ ಅಹಂಕಾರ ತಾರಕಕ್ಕೇರಿದೆ. ಜನರ ಮೇಲೆ ತಮ್ಮ ಅಧಿಕಾರದ ದರ್ಪವನ್ನು ತೋರಿಸುತ್ತಿದೆ. ಇದೀಗ ಮತ್ತೆ ಕೈ ನಾಯಕನ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದೆ. 

ಟೋಲ್ಗೇಟ್ ನಲ್ಲಿ ಸಾಮಾನ್ಯವಾಗಿ ಎಲ್ಲರೂ ಟೋಲ್ ಕಟ್ಟುತ್ತಾರೆ. ಆದರೆ ಬೆಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ರಾಜಕೀಯ ಪುಡಾರಿಗಳು ಪುಂಡಾಟ ನಡೆಸಿ ಟೋಲ್ ದುಡ್ಡು ಕಟ್ಟಲು ಹಿಂದೇಟು ಹಾಕಿ ಧಿಮಾಕು ಪ್ರದರ್ಶನ ತೋರಿದ್ದಾರೆ. ಟೋಲ್ ಕಟ್ಟುವುದಿಲ್ಲ ಎಂದು ರಂಪಾಟ ನಡೆಸಿದ ಕಾಂಗ್ರೆಸ್‌ ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿದ್ದಲ್ಲದೆ ಹಲ್ಲೆ ಕೂಡಾ ನಡೆಸಿದ್ದಾರೆ. 

ನಡೆದ ಘಟನೆ ಏನು...?

ನಿನ್ನೆ ಮಧ್ಯಾಹ್ನ ಕಾಂಗ್ರೆಸ್ ಪಕ್ಷದ ಸಮಿತಿ ಒಂದರ ಪದಾಧಿಕಾರಿ ಬೋರ್ಡ್‌ ಹಾಕಿದ ಕಾರು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್‌ಗೆ ಬಂದಿತ್ತು. ಮೈಸೂರು ಕಡೆಗೆ ಹೊರಟಿದ್ದ ಕಾರು ಚಾಲಕ ಮತ್ತು ಅದರ ಒಳಗಡೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಟೋಲ್‌ ಕಟ್ಟಲು ನಿರಾಕರಿಸಿದ್ದಾರೆ. ಆ ಸಂದರ್ಭ ಟೋಲ್ ನಿಂದ ಕಾರನ್ನು ಕೂಡಾ ಬಿಡಲಿಲ್ಲ. ನಂತರ ಯಾಕೆ ಕಾರನ್ನು ಬಿಡುತ್ತಿಲ್ಲ ಎಂದು ಪ್ರಶ್ನಿಸಿ ಕೈ ಮುಖಂಡ ಕಾರಿನಿಂದ ಇಳಿದು ಅವಾಜ್ ಹಾಕಿದ್ದಾನೆ. ನಾನು ಕಾಂಗ್ರೆಸ್‌ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಏನು ಈವಾಗ ಎಂದು ದರ್ಪ ತೋರಿಸಿದ್ದಾನೆ. ಆ ಸಂದರ್ಭ ಟೋಲ್‌ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಟೋಲ್ ವಿಚಾರದಲ್ಲಿ ಜಡೆ ಜಗಳ...!!

ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳಾ ಕಾರ್ಯಕರ್ತೆಯೊಬ್ಬರು ಕೆಳಗೆ ಇಳಿದು ಟೋಲ್ ನ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಬಂದರೂ ಕೆಲಕಾಲ ಜಗಳ ಮುಗಿದಿಲ್ಲ. ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರನ್ನು ದಾಖಲಿಸಿಕೊಳ್ಳದೇ ಅವರನ್ನ ಸ್ಥಳದಿಂದ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ರಾಜಕೀಯದವರು ಏನು ಮಾಡಿದ್ರೂ ಸರೀನಾ...? ಅವರಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯನಾ ಎಂದು ಈ ಬಗ್ಗೆ ಸ್ಥಳೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.