ಕೊಲ್ಲೂರಿಗೆ ಭೇಟಿ ನೀಡಿದ ಕಾಲಿವುಡ್ ಸ್ಟಾರ್ ದಂಪತಿ!;ಕೊಲ್ಲೂರು ಚಂಡಿಕಾಯಾಗದಲ್ಲಿ ಸೂರ್ಯ-ಜ್ಯೋತಿಕಾ ಭಾಗಿ

  • 27 Nov 2024 03:12:17 PM

ಕೊಲ್ಲೂರು: ರಾಜ್ಯದ ದೇಗುಲಗಳಲ್ಲಿ ಒಂದು ಎನಿಸಿಕೊಂಡಿರುವ,ಲಕ್ಷಾಂತರ ಭಕ್ತರು ಪ್ರತಿನಿತ್ಯ ಭೇಟಿ ನೀಡುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇದೀಗ ಕಾಲಿವುಡ್ ಸ್ಟಾರ್ ದಂಪತಿಗಳು ಬಂದಿಳಿದಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಕೊಲ್ಲೂರಿಗೆ ಆಗಮಿಸಿದ್ದು, ಫೋಟೋಗಳು ವೈರಲ್ ಆಗಿವೆ.

 

ಚಂಡಿಕಾಯಾಗದಲ್ಲಿ ಭಾಗಿ..

 

ಭಾರತದಾದ್ಯಂತ ಸಾಕಷ್ಟು ಖ್ಯಾತಿ ಗಳಿಸಿರುವ ನಟ ಸೂರ್ಯ ಅವರಿಗೆ ಎಲ್ಲೆಡೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ದೇಗುಲಗಳ ಭೇಟಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸೂರ್ಯ ಇದೀಗ ಪತ್ನಿ ಸಮೇತ ಕರ್ನಾಟಕದ ಪ್ರಮುಖ ದೇಗುಲ ಕೊಲ್ಲೂರಿಗೆ ಆಗಮಿಸಿದ್ದು, ಈ ವೇಳೆ ಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದಾರೆ. ಈ ಬಗೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಇತ್ತೀಚೆಗಷ್ಟೇ ಸೂರ್ಯ ಅಭಿನಯದ 'ಕಂಗುವಾ' ಸಿನಿಮಾ‌ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಸದ್ಯ, ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರೊಂದಿಗೆ ಸೇರಿ ಮುಂದಿನ ಸಿನಿಮಾ ಸಿದ್ಧತೆಯಲ್ಲಿರುವ ಸೂರ್ಯ ಈ ನಡುವೆ ಕೊಲ್ಲೂರಿಗೆ ಆಗಮಿಸಿದ್ದಾರೆ.