ಶಬರಿಮಲೆ: ಅಯ್ಯಪ್ಪನ ಭಕ್ತಾದಿಗಳು ಈಗಾಗಲೇ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದಾರೆ. ಮಂಡಲ ಪೂಜೆ ಕೂಡಾ ನಡೆಯುತ್ತಿದೆ. ಹಿಂದೂಗಳಲ್ಲಿ ಸಾಮಾನ್ಯವಾಗಿ ಪುರುಷರು ವೃತಾಚರಣೆ ನಡೆಸಿ ಮಾಲಾಧಾರಿಗಳಾಗಿ ಇರುಮುಡಿ ಕಟ್ಟಿಕೊಂಡು ಶಬರಿಮಲೆಗೆ ತೆರಳುವುದು ವಾಡಿಕೆ. ಇದೀಗ ಶಬರಿಮಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಶಬರಿಮಲೆಯ 18ನೇ ಮೆಟ್ಟಿಲಲ್ಲಿ ಕಂಡುಬಂದ ಬೃಹದಾಕಾರದ ಹಾವು...!!
ಶಬರಿಮಲೆಯ ಸನ್ನಿಧಾನದಲ್ಲಿ ಬೃಹತ್ ಹಾವೊಂದು ಕಂಡುಬಂದಿದ್ದು ಭಕ್ತಾದಿಗಳು ನೋಡಿ ದಂಗಾಗಿದ್ದಾರೆ. ಅರಣ್ಯ ಅಧಿಕಾರಿಗಳು ಆ ಹಾವನ್ನು ಸೆರೆಹಿಡಿದಿದ್ದಾರೆ. ಶುಕ್ರವಾರ ಬೆಳಗ್ಗೆ ಅಪ್ಪಂ ಮತ್ತು ಅರವಣ ಪ್ರಸಾದದ ಕೌಂಟರ್ ಗೆ ಹೋಗುವ ಆವರಣ ಗೋಡೆಯಲ್ಲಿ ಹಾವೊಂದು ಪತ್ತೆಯಾಗಿದ್ದು ಭಕ್ತಾದಿಗಳು ಭಯಭೀತರಾಗಿದ್ದಾರೆ.
20 ನಿಮಿಷದ ಕಾರ್ಯಾಚರಣೆಯಲ್ಲಿ ಹಾವು ಸೆರೆ..!!
ಹಾವು ಕಂಡುಬಂದ ಮಾರ್ಗವನ್ನು ತಕ್ಷಣ ಮುಚ್ಚಿಸಿ ದೇಗುಲದ ಸಿಬ್ಬಂದಿ ಅರಣ್ಯ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದಾರೆ. ಕೈಕಂಬದಿಂದ ಮೆಟ್ಟಿಲಿಗೆ ಹಾರಿದ ಹಾವನ್ನು ಹಿಡಿಯಲು ಅಧಿಕಾರಿಗಳು 20 ನಿಮಿಷ ತೆಗೆದುಕೊಂಡಿದ್ದಾರೆ. 18ನೇ ಮೆಟ್ಟಿಲ ಬಳಿ ಇದೇ ಮೊದಲ ಬಾರಿಗೆ ಎನ್ನಲಾಗಿದೆ.
ಭಕ್ತರ ರಕ್ಷಣೆಗೆ ದೇಗುಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿ...!!
ಶಬರಿಮಲೆ ಅರಣ್ಯಪ್ರದೇಶವಾಗಿದ್ದರಿಂದ ಈಗಾಗಲೇ ಸನ್ನಿಧಾನದ ಬಳಿ 33 ಹಾವುಗಳು ಕಂಡುಬಂದಿದ್ದು ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಇದೀಗ ಸನ್ನಿಧಾನದಲ್ಲಿ ಹಾವು ಹಿಡಿಯುವವರು ಮತ್ತು ಎಲಿಫೆಂಟ್ ಗಾರ್ಡ್ ಗಳು ಸೇರಿದಂತೆ ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.