ಅಂಗೈಯಲ್ಲಿ ಆಕಾಶ ತೋರಿಸಿ‌ ಕಾಂಗ್ರೆಸ್ ಬಡವರ ರಕ್ತ ಹೀರುತ್ತಿದೆ!;ರಾಜ್ಯ ಸರ್ಕಾರದ ಕುತಂತ್ರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಬಿ.ವೈ.ವಿಜಯೇಂದ್ರ!

  • 27 Nov 2024 04:25:24 PM

ಹಿಂದೂ ರಿಪಬ್ಲಿಕ್:- ಹತ್ತಾರು ಹಗರಣಗಳಿಂದ ಕಂಗೆಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕೊಟ್ಟಿರು ಗ್ಯಾರಂಟಿ ಉಳಿಸಿಕೊಳ್ಳಲು ಪರದಾಡುತ್ತಿದೆ. ಈ‌ ನಡುವೆ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುವ ಮಾತು ಕೇಳಿ ಬಂದಿದ್ದು, ಭಾರೀ ಜನಾಕ್ರೋಶ ಎದುರಿಸುವಂತಾಗಿದೆ. ಈ ನಡುವೆ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿರುವ ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ‌.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ಕುತಂತ್ರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ‌.

 

ವಿಜಯೇಂದ್ರ ವಾಗ್ದಾಳಿ!

 

ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಗ್ಯಾರಂಟಿಗಳ ಆಸೆ ತೋರಿಸಿ ರಾಜ್ಯದ ಜನರನ್ನು ಮರಳು ಮಾಡಿರುವ ಕಾಂಗ್ರೆಸ್ ಇದೀಗ ಜನರ ರಕ್ತ ಹೀರುತ್ತಿದೆ‌.ಪೆಟ್ರೋಲ್, ಡಿಸೆಲ್, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಮಾಡು ಜೊತೆಗೆ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸಾ ಶುಲ್ಕ ಶೇ.20 ಏರಿಕೆ ಮಾಡಲಾಗಿದೆ‌. ಇಷ್ಟೂ ಸಾಲದೆಂಬಂತೆ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುವುದರೊಂದಿಗೆ ರಾಜ್ಯದ ಜನರನ್ನು ಹಸಿವಿನ ಕೂಪಕ್ಕೆ ತಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

 

ಸಿ.ಎಂ ಕುರ್ಚಿ ಮಾರಾಟಕ್ಕಿದೆ!

 

ಮಾತು ಮುಂದುವರೆಸಿದ ವಿಜಯೇಂದ್ರ, ರಾಜ್ಯ ಸರ್ಕಾರ ಆರ್ಥಿಕ ಕ್ರೋಡೀಕರಣ ಮಾಡಲಾಗದೆ ಕಂಗಾಲಾಗಿದೆ‌. ಶಾಸಕರಿಗೆ ಅನುದಾನ ನೀಡುವುದಕ್ಕೂ ಹಣವಿಲ್ಲದಂತಾಗಿದೆ. ಮತ್ತೊಂದೆಡೆ 50,100 ಕೋಟಿ ಆಮಿಷ ಒಡ್ಡಲಾಗುತ್ತಿದೆ‌. ಹೀಗೆ ಮುಂದುವರೆದರೆ ರಾಜ್ಯದಲ್ಲಿ ಸಿ.ಎಂ ಕುರ್ಚಿಯೂ ಕೂಡ ಮಾರಾಟಕ್ಕೆ ಇಡುವ ಸ್ಥಿತಿ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾಗಬಹುದು' ಎಂದು ಹೇಳಿದ್ದಾರೆ.