ರಿಪಬ್ಲಿಕ್ ಹಿಂದೂ:- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಮೇಲೆ ನಡೆಸಿದ ಅವಾಂತರಗಳು ಒಂದೆರಡಲ್ಲ. ಇದೀಗ ವಕ್ಫ್ ಭೂಮಿ ವಿವಾದ ವಿಭಿನ್ನ ರೀತಿಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ವಿರುದ್ಧ ಬಿಜೆಪಿ ಮುಖಂಡರು, ಮಠಾಧೀಶರು ರೊಚ್ಚಿಗೆದ್ದಿದ್ದಾರೆ. ಈ ವಕ್ಫ್ ಭೂಮಿ ವಿಚಾರಕ್ಕೆ ವಿರೋಧಿಸಿ ತೀವ್ರವಾದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಲವ್ ಜಿಹಾದ್ ಥರ ಇದೀಗ ಲ್ಯಾಂಡ್ ಜಿಹಾದ್...!!
ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ವಕ್ಫ್ ಎಂಬ ಯೋಚನೆಯೇ ಇರಲಿಲ್ಲ. ಬಳಿಕ ದೇಶ ವಿಭಜನೆ ಆದಾಗ ಬಿಟ್ಟು ಹೋದವರ ಸಲುವಾಗಿ ವಕ್ಫ್ ಜಾರಿಗೆ ಬಂತು. ಲವ್ ಜಿಹಾದ್ ಥರಾನೇ ಇದೀಗ ಲ್ಯಾಂಡ್ ಜಿಹಾದ್ ಶುರುವಾಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಜಮೀರ್ ಗೆ ವಕ್ಫ್ ಅದಾಲತ್ ಮಾಡಲು ಸಾಧ್ಯವಿಲ್ಲ
ಇನ್ನು ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಸಚಿವೆ ಶೋಭಾ ಕರಂದ್ಲಾಜೆ ` ಸಚಿವ ಜಮೀರ್ ಖಾನ್ ಗೆ ಕಾನೂನು ಪ್ರಕಾರ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ. ಒತ್ತಡದ ಮೂಲಕ ಆಸ್ತಿಗೆ ನೋಟಿಸ್ ಕೊಡಲಾಗುತ್ತಿದೆ. ವಕ್ಫ್ ಟ್ರಿಬ್ಯೂನಲ್ ನಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಕೇವಲ ಒಂದು ಧರ್ಮ ಓಲೈಕೆಗಾಗಿ ವಕ್ಫ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ
ವಕ್ಫ್ ವಿವಾದದಲ್ಲಿ ಜಮೀರ್ ಮತ್ತು ಸಿಎಂ ಸಿದ್ದರಾಮಯ್ಯ ಅವರದ್ದೇ ಮುಖ್ಯ ಪಾತ್ರ. ಮೊದಲಿಗೆ ಅವರಿಬ್ಬರನ್ನು ನೇರವಾಗಿ ಮನೆಗೆ ಕಳಿಸಬೇಕು. ಅಲ್ಲಿಯವರೆಗೆ ಹೋರಾಟ ನಡೆಯಲಿದೆ ಎಂದು ಸಚಿವರು ಶೋಭಾ ಕರಂದ್ಲಾಜೆ ವಾಕ್ಪ್ರಹಾರ ನಡೆಸಿದರು.