ಹಿಂದೂ ರಿಪಬ್ಲಿಕ್:- ರಾಜ್ಯದಲ್ಲಿ ವಕ್ಫ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕತ್ವದ ಸರ್ಕಾರ ಅನ್ಯ ಮತೀಯರನ್ನು ಓಲೈಸಲು ವಿವಿಧ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದೆ. ಈ ವಕ್ಫ್ ಭೂಮಿ ವಿವಾದ ಒಂದು ರೀತಿಯಲ್ಲಿ ಭೂಮಿ ಕಬಳಿಕೆಯ ನೂತನ ಸಂಚು ಎಂದು ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಬಿಜೆಪಿ ಮುಖಂಡರು, ಮಠಾಧೀಶರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ವಕ್ಫ್ ವಿರುದ್ಧ ಬಿಜೆಪಿಯಲ್ಲಿ ನೂತನ ರೆಬೆಲ್ಸ್ ಟೀಂ ರಚನೆಯಾಗಿದೆ.
ವಕ್ಫ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಗಡಿ ಜಿಲ್ಲೆಯಲ್ಲಿ ಬಿಜೆಪಿ ರೆಬಲ್ಸ್ ಟೀಂ ಇಂದಿನಿಂದ ವಕ್ಫ್ ವಿರುದ್ಧ ಹೋರಾಟ ಆರಂಭಿಸಲಿದೆ. ʻವಕ್ಫ್ ಹಠಾವೋ ಭಾರತ್ ದೇಶ್ ಬಚಾವೋʼ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡ ಹೋರಾಟ ನಡೆಸಲಿದೆ.
*ಡಿ.1 ರವರೆಗೆ 5 ಜಿಲ್ಲೆಗಳಲ್ಲಿ ನಡೆಯಲಿದೆ ಹೋರಾಟ...!!*
ಇಂದು ಬೆಳಗ್ಗೆ ಬೀದರ್ ನ ಝರಣಿ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಕ್ಫ್ ವಿರುದ್ಧ ಹೋರಾಟವನ್ನು ಆರಂಭಿಸಲಾಗಿದೆ. ಈ ಹೋರಾಟ ಡಿಸೆಂಬರ್ 1ರ ವರೆಗೆ ಐದು ಜಿಲ್ಲೆಗಳಲ್ಲಿ ನಡೆಯಲಿದೆ. ಅಲ್ಲದೇ ಚಳಿಗಾಲದ ಅಧಿವೇಶನದಲ್ಲಿ ಕೂಡಾ ವಕ್ಫ್‌ನಿಂದಾಗಿರುವ ಸಮಸ್ಯೆಗಳ ಕುರಿತು ಬಿಜೆಪಿ ಗಮನ ಸೆಳೆಯಲಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿ ಹಲವರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಇಂದು ಹೋರಾಟದ ಜೊತೆಗೆ ರೈತರು ಮತ್ತು ಜನಸಾಮಾನ್ಯರ ಜೊತೆ ಅಹವಾಲು ಸ್ವೀಕಾರ ಕೂಡಾ ನಡೆಯಲಿದೆ. ಸಂಜೆ 4 ಗಂಟೆಗೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದೆ. ಸುಮಾರು 300 ರೈತ ಕುಟುಂಬಗಳ 960 ಎಕರೆ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖವಾಗಿದ್ದ ಚಟ್ನಳ್ಳಿ ಗ್ರಾಮಕ್ಕೆ ರೆಬಲ್ಸ್ ಟೀಂ ಭೇಟಿ ನೀಡಲಿದೆ. ಈ ಸಂದರ್ಭ ಏನೆಲ್ಲಾ ಮಹತ್ತರ ಮಾಹಿತಿ ಲಭ್ಯವಾಗುತ್ತದೆ ಎಂದು ಕಾದುನೋಡಬೇಕಷ್ಟೆ.