ನನ್ನ ಮಗುವನ್ನು ಹಣಕ್ಕಾಗಿ ಸೇಲ್ ಮಾಡಿದ್ದಾರೆ ಎಂದ ಮಹಿಳೆ...!! ಅಷ್ಟಕ್ಕೂ ಲೇಡಿಗೋಶನ್ ಆಸ್ಪತ್ರೆಯಲ್ಲಿ ನಡೆದಿದ್ದೇನು..???

  • 28 Nov 2024 12:09:31 PM

ಮಂಗಳೂರು: ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಹೆರಿಗೆ ಆಸ್ಪತ್ರೆ ಎಂದೇ ಜಿಲ್ಲೆಯಲ್ಲಿ ಚಿರಪರಿಚಿತ. ಇಲ್ಲಿ ಅದೆಷ್ಟೋ ತಾಯಂದಿರು ತಮ್ಮ ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ನನ್ನ ಮಗುವನ್ನು ಹಣಕ್ಕಾಗಿ ಮಾರಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೊಸ ವರಸೆ ಶುರು ಮಾಡಿಕೊಂಡಿದ್ದಾಳೆ. ಆದರೆ ಇಲ್ಲಿಯ ವೈದ್ಯಾಧಿಕಾರಿಗಳು ಮತ್ತೊಂದು ರೀತಿಯ ಅಚ್ಚರಿಕರ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ..? ಯಾವುದು ಸುಳ್ಳು..? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..? ಇಲ್ಲಿದೆ ನೋಡಿ ಮಾಹಿತಿ.

 

ಘಟನೆಯ ವಿವರ:-

 

ಭವ್ಯ ಎಂಬ ಮಹಿಳೆ ಅಗಸ್ಟ್ ಆಗಸ್ಟ್‌ 18ರಂದು ಬೆಳಗ್ಗೆ 9.58ಕ್ಕೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರ ಏಕಾಏಕಿ ತನ್ನ ಮಗುವನ್ನು ಅದೇ ದಿನ ರಾತ್ರಿ ಅಲ್ಲಿನ ನರ್ಸ್ ಮತ್ತು ಇತರ ಸಿಬ್ಬಂದಿ ಸೇರಿ ನನ್ನ ಹಣಕ್ಕಾಗಿ ಮಾರಾಟ ಮಾಡಿದ್ದಾರೆ. ಇಲ್ಲಿ ನನ್ನದೊಂದು ವಿನಂತಿ ಯಾರು ನನ್ನ ಮಗುವನ್ನು ಕೊಂಡು ಹೋಗಿದ್ದೀರಿ ಅವರು ಮಗುವನ್ನು ನನಗೆ ದಯವಿಟ್ಟು ನನ್ನ ಮಗುವನ್ನು ಹಿಂತಿರುಗಿಸಿ. ಹೆತ್ತ ತಾಯಿಯಾದ ನಾನು ಪಡುತ್ತಿರುವ ಸಂಕಟ ಅಷ್ಟಿಷ್ಟಲ್ಲ. ಹೆತ್ತ ಮಗುವನ್ನು ಕಳೆದುಕೊಂಡ ನೋವು ನನಗೆ ಮಾತ್ರ ಗೊತ್ತು. 

ದಯವಿಟ್ಟು ನನ್ನ ಮಗು ಸಿಗುವ ವರೆಗೂ ಈ ಮೆಸೇಜ್ ಅನ್ನು ಕಳುಹಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶವನ್ನು ಬರೆದು ವೈರಲ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಜನಸಾಮಾನ್ಯರಲ್ಲೂ ಈ ಘಟನೆ ದಿಗಿಲು ಹುಟ್ಟಿಸಿತ್ತು. ಆದರೆ ಇದೀಗ ಘಟನೆ ಬೇರೆಯೇ ತಿರುವೊಂದನ್ನು ಪಡೆದುಕೊಂಡಿದೆ.

 

ಘಟನೆಯ ಅಸಲಿಯೆತ್ತೇನು..? ಅಧೀಕ್ಷಕರು ಏನು ಸ್ಪಷ್ಟನೆ ನೀಡ್ತಾರೆ...? 

 

ಭವ್ಯಾ ಅವರು ಹೆತ್ತ ಮಗುವಿಗೆ ಒಂದು ಕಣ್ಣು ಗುಡ್ಡೆ ಇಲ್ಲದಿರುವುದನ್ನು ತಜ್ಞರು ಆಕೆಗೆ ಹೆರಿಗೆಯಾದ ಕೂಡಲೇ ತಿಳಿಸಿರುತ್ತಾರೆ. ಆ ಸಂದರ್ಭ ಶಾಕ್ ಗೊಳಗಾದ ಆಕೆ ಹಾಗಾದರೆ ಈ ಶಿಶು ತನ್ನದಲ್ಲವೆಂದು ಆಕೆ ನಿರಾಕರಿಸಿದ್ದರು. ತನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಹೊರಿಸಿದ್ದರು. ನಂತರ ಈ ವಿಚಾರದಲ್ಲಿ ಪೊಲೀಸ್ ಅವರು ಮಧ್ಯ ಪ್ರವೇಶಿಸಿ ತನಿಖೆ ನಡೆದು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಡಿಎನ್‌ಎ ಪರೀಕ್ಷೆ ಮಾಡುವ ಸಲುವಾಗಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಡಿಎನ್‌ಎ ಪರೀಕ್ಷೆಯ ವರದಿಯನ್ನು ನೇರವಾಗಿ ತನಿಖಾಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಸಂಬಂಧಿತರು ನೀಡಿದ್ದರು. ಈಗ ಭವ್ಯಾ ಅವರ ಮಗು ದ.ಕ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿ ಸುರಕ್ಷಿತವಾಗಿದೆ ಹೊರತು ಯಾವುದೇ ಕಾರಣಕ್ಕೂ ಯಾರಿಗೂ ಮಾರಾಟವಾಗಿಲ್ಲ. ಆದರೆ ಇತ್ತೀಚಿನ ಎರಡು ದಿನಗಳಲ್ಲಿ ಭವ್ಯಾ ತನ್ನ ಶಿಶುವನ್ನು ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿರುತ್ತಾರೆ ಎಂದು ಮಾನಹಾನಿಕರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸುತ್ತಾ, ಸಮಾಜದಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಅಲ್ಲದೆ ಹೆರಿಗೆ ಮತ್ತು ಸ್ತ್ರೀರೋಗ ಸಂಬಂಧ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸರಕಾರಿ ಒಡೆತನದ ಲೇಡಿಗೋಶನ್ ಆಸ್ಪತ್ರೆಯ ಹೆಸರಿಗೆ ಕಳಂಕವನ್ನು ತರುವ ವಿಚಾರಕ್ಕೆ ಇಳಿದಿರುವುದು ವಿಷಾದಕರ. ಈ ಪ್ರಕರಣವು ನ್ಯಾಯಾಲಯದ ಪರಾಮರ್ಶೆಯ ಹಂತದಲ್ಲಿರುವ ಕಾರಣ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ನ್ಯಾಯಾಲಯದ ತೀರ್ಪಿನ ಬಳಿಕವೇ ಸತ್ಯ ಸಂಗತಿ ಹೊರಬೀಳಲಿದೆ.