ರಿಪಬ್ಲಿಕ್ ಹಿಂದೂ:- ಭಾರತೀಯ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಅತ್ಯಂತ ಮೂಲ ದಾಖಲೆ. ಇದಿಲ್ಲದಿದ್ದರೆ ಅದ್ಯಾವ ಸರ್ಕಾರಿ ಕೆಲಸವೂ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಜನವರಿ 28, 2009 ರಂದು ಪರಿಚಯಿಸಲಾದ ಆಧಾರ್ ಕಾರ್ಡ್ ಭಾರತದ ಅತ್ಯಂತ ಅಗತ್ಯವಾದ ಗುರುತಿನ ದಾಖಲೆಗಳಲ್ಲಿ ಇದೂ ಒಂದು. ಇದೊಂದು ನಮ್ಮ ಕೈಯಲ್ಲಿದ್ದರೆ ಬ್ಯಾಂಕ್ ವ್ಯವಹಾರ, ಸರ್ಕಾರಿ ಕಚೇರಿ ಕೆಲಸಗಳು ಅಷ್ಟೇ ಏಕೆ ಈಗ ಬಸ್ ಪ್ರಯಾಣ ಕೂಡಾ ಅತ್ಯಂತ ಸುಲಭ. ಆಧಾರ್ ಕಾರ್ಡ್ ನ್ನು ಆಗಾಗ ಅಪ್ಡೇಟ್ ಮಾಡುತ್ತಿರೋದು ಅತ್ಯಂತ ಮುಖ್ಯ. ಈಗಾಗಲೇ ಆಧಾರ್ ಕಾರ್ಡ್ ಫ್ರೀ ಅಪ್ಡೇಟ್ ಸೌಲಭ್ಯ ಮುಗಿಯುವ ಹಂತದಲ್ಲಿದ್ದು ಶೀಘ್ರವಾಗಿ ಆಧಾರ್ ನ್ನು ನವೀಕರಿಸಬೇಕಾಗಿದೆ.
ಡಿಸೆಂಬರ್ 14, 2024ರ ಮೊದಲು ಆಧಾರ್ ನವೀಕರಣ ಕಡ್ಡಾಯ...!
ನೀವು ಆಧಾರ್ ಕಾರ್ಡ್ ಪಡೆದು 10 ವರ್ಷಕ್ಕೂ ಹೆಚ್ಚಾಗಿದ್ದು, ಇನ್ನೂ ಅಪ್‌ಡೇಟ್ ಮಾಡದೇ ಇದ್ದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಆ ಆಧಾರ್ ಗೆ ಕೂಡಾ ಏನೂ ಮೌಲ್ಯವಿರುವುದಿಲ್ಲ. ನಿಮ್ಮ ಆಧಾರ್ ವಿವರಗಳನ್ನು ನವೀಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಶಿಫಾರಸು ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ವೈಯಕ್ತಿಕ ಹೆಸರಿನಲ್ಲಿ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ಯಾವುದೇ ವಿಷಯದಲ್ಲಿ ಬದಲಾವಣೆ ಬೇಕಿದ್ದರೂ ಈ ಕೂಡಲೇ ಸರಿಪಡಿಸಿ ನವೀಕರಣಗೊಳಿಸುವುದು ಉತ್ತಮ. ಬರುವ ತಿಂಗಳು ಡಿಸೆಂಬರ್ 14ರ ಮೊದಲು ಆಧಾರ್ ಅಪ್ಡೇಟ್ ಮಾಡಿಸಿಕೊಂಡರೆ ನಿಮ್ಮ ಆಧಾರ್ ಮಾಹಿತಿಯು ನವೀಕೃತವಾಗಿದೆ ಎಂದು ಖಚಿತಪಡಿಸುತ್ತದೆ. ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಪಡೆಯಲು ಕೂಡಾ ಸಹಾಯವಾಗುತ್ತದೆ.
ಆನ್ಲೈನ್ ನಲ್ಲಿ ಆಧಾರ್ ನ್ನು ಹೀಗೆ ಅಪ್ಡೇಟ್ ಮಾಡ್ಕೊಳ್ಳಿ...
ಮೊದಲಿಗೆ UIDAI ವೆಬ್‌ಸೈಟ್ ನಲ್ಲಿ myaadhaar.uidai.gov.in ಗೆ ಭೇಟಿ ನೀಡಿ. ನಂತರ ‘ಮೈ ಆಧಾರ್’ ಆಯ್ಕೆಮಾಡಿ ಮತ್ತು ‘ಅಪ್‌ಡೇಟ್ ಯುವರ್ ಆಧಾರ್ ಗೆ ’ ಕ್ಲಿಕ್ ಮಾಡಬೇಕು. ಆಗ ಅಪ್‌ಡೇಟ್ ಪುಟ ತೆರೆದುಕೊಳ್ಳುತ್ತದೆ. ಅದಕ್ಕೆ ಪ್ರವೇಶಿಸಿ ‘ಅಪ್‌ಡೇಟ್ ಆಧಾರ್ ಡಿಟೇಲ್ಸ್ʼ ಹೋಗಿ ‘ಡಾಕ್ಯುಮೆಂಟ್ ಅಪ್‌ಡೇಟ್’ ಆಯ್ಕೆ ಮಾಡಬೇಕು. ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ನಂತರ ‘ಸೆಂಡ್ ಒಟಿಪಿ’ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿಕೊಂಡು ನೀವು ಯಾವ ಮಾಹಿತಿಯನ್ನು ನವೀಕರಣಗೊಳಿಸಲು ಬಯಸುತ್ತೀರಿ ಆ ವಿವರಗಳಿಗೆ ಸೂಕ್ತ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಕೊನೆಯದಾಗಿ ಸಬ್‌ಮಿಟ್ ಅಪ್‌ಡೇಟ್ ರಿಕ್ವೆಸ್ಟ್’ ಕ್ಲಿಕ್ ಮಾಡಿದರೆ ಆಧಾರ್ ಆನ್ಲೈನ್ ನಲ್ಲೇ ಅಪ್ಡೇಟ್ ಆಗುತ್ತದೆ. ಹೀಗೆ ಸರಳವಾಗಿ ಮನೆಯಲ್ಲೇ ಕೂತು ಖರ್ಚಿಲ್ಲದೆ ಆನ್ಲೈನ್ ಮುಖೇನ ಈ ಹಂತಗಳನ್ನು ಪಾಲಿಸಿ ಆಧಾರ್ ಕಾರ್ಡನ್ನು ಮರು ನವೀಕರಣಗೊಳಿಸಬಹುದು.