ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನಕ್ಕೆ ಶಿಂಧೆ ದಿಢೀರ್ ರಾಜೀನಾಮೆ...! ಮುಂದಿನ ಮುಖ್ಯಮಂತ್ರಿ ಸ್ಥಾನದ ರೇಸಲ್ಲಿ ಯಾರಿದ್ದಾರೆ ಗೊತ್ತಾ..????

  • 28 Nov 2024 12:32:55 PM

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ವಿಚಾರದ ಬಗ್ಗೆ ಅನೇಕ ವಾದ- ವಿವಾದ, ಚರ್ಚೆಗಳು ನಡೆಯುತ್ತಲೇ ಇದೆ. ಮುಂಬರುವ ಚುನಾವಣೆಯನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ಪಕ್ಷಗಳು ನಿರ್ಧಾರವನ್ನು ಕೈಗೆತ್ತಿಕೊಳ್ಳಲಿದೆ. ಈ ನಡುವೆ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರು ದಿಢೀರನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹಲವಾರು ಕೌತುಕಕ್ಕೆ ಎಡೆಮಾಡಿಕೊಟ್ಟಿದೆ. 

 

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಶಿಂಧೆ....!

 

ಶಿಂಧೆ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರೊಂದಿಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಕೂಡಾ ಉಪಸ್ಥಿತರಿದ್ದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್ ಸಿಪಿಯ ಮಹಾಮೈತ್ರಿಕೂಟವು ಭಾರೀ ಬಹುಮತವನ್ನು ಸಾಧಿಸಿದೆ.

 

ರಾಜೀನಾಮೆ ಸಲ್ಲಿಸಿದ ಇಡೀ ಸಂಪುಟ...!!

 

ಶಿಂಧೆ ಜೊತೆಗೆ ಇಡೀ ಸಂಪುಟವೇ ಇಂದು ರಾಜೀನಾಮೆ ಸಲ್ಲಿಸಿದೆ. ಆದರೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಮುಂದಿನ ಸರ್ಕಾರ ರಚನೆಯಾಗುವವರೆಗೂ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ನೂತನ ಸಿಎಂ ಹೆಸರನ್ನು ಕೂಡಾ ಇಂದೇ ಘೋಷಿಸಲಾಗುವುದುವೆಂದು ಹೇಳಲಾಗ್ತಿದೆ. ದೇವೇಂದ್ರ ಫಡ್ನವಿಸ್ ನೂತನ ಸಿಎಂ ಆಗೋದು ಗ್ಯಾರಂಟಿ ಎಂದೇ ಹೇಳಲಾಗುತ್ತಿದ್ದು ಘೋಷಣೆಗೆ ಕಾದುನೋಡಬೇಕಷ್ಟೆ.