ನೀರ್ಚಾಲ್ : ಕಿಳಿಂಗಾರ್ ಯುವಕೇಸರಿ ಕ್ಲಬ್ಬಿನಿಂದ ಧಾರ್ಮಿಕ ರಸಪ್ರಶ್ನೆ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ

  • 20 Oct 2024 03:45:32 PM

ನೀರ್ಚಾಲ್:- ಯುವಕೇಸರಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಕಿಳಿಂಗಾರ್ ಇದರ ವತಿಯಿಂದ ನವರಾತ್ರಿ ಪ್ರಯುಕ್ತ ನಡೆಸಲ್ಪಟ್ಟ ಧಾರ್ಮಿಕ ಆನ್ಲೈನ್ ರಸಪ್ರಶ್ನೆ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆಯು ಕಿಳಿಂಗಾರ್ ಯುವಕೇಸರಿ ಕ್ಲಬ್ಬಿನಲ್ಲಿ ಜರಗಿತು. ಕ್ಲಬ್ಬಿನ ಅಧ್ಯಕ್ಷ ಪ್ರವೀಣ್ ಕಕ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾರಾಯಣ.ಪಿ ಪೆರಡಾಲ ಕ್ಲಬ್ಬಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬಳಿಕ ರಸಪ್ರಶ್ನೆ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಸುಜಾತ ಶೆಟ್ಟಿ ದರ್ಬೆತ್ತಡ್ಕ, ದ್ವಿತೀಯ ಜಗದೀಶ್ ಕಿಳಿಂಗಾರ್, ತೃತೀಯ ಶ್ಯಾಮ ಆಳ್ವ ವಿದ್ಯಾಗಿರಿ ಎಂಬಿವರಿಗೆ ಕ್ಲಬ್ಬಿನ ಸದಸ್ಯರಾದ ವಸಂತ ಅನ್ನೆಪಳ್ಳಡ್ಕ, ರಾಮ ಬೇರಿಕೆ ಹಾಗೂ ನಾರಾಯಣ.ಪಿ ಬಹುಮಾನ ವಿತರಿಸಿದರು. 

ಕ್ಲಬ್ಬಿನ ಸದಸ್ಯರಾದ ರಾಕೇಶ್ ಕಿಳಿಂಗಾರ್, ರಾಜೇಶ್ ಬೇರಿಕೆ ,ಅನಿಲ್ ಕನ್ಯಪ್ಪಾಡಿ,ಪ್ರಶಾಂತ್ ಸಿ ಯಚ್, ಮನೋಜ್ ಕಿಳಿಂಗಾರ್, ಅನೀಶ್, ರಕ್ಷಿತ್ ಕಕ್ಕಳ ಎಂಬಿವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಕಾಶ್ ಸಿಯಚ್ ಸ್ವಾಗತಿಸಿ ರಂಜಿತ್ ಕಕ್ಕಳ ವಂದಿಸಿದರು.