ರಿಪೇರಿ ಹೆಸರಿನಲ್ಲಿ ಹಣ ನುಂಗುತ್ತಿದ್ದಾರೆ...- ರೈಲ್ವೇ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪ...!!!!

  • 28 Nov 2024 12:40:05 PM

ಸುಬ್ರಹ್ಮಣ್ಯ:ಅನೇಕ ಸರ್ಕಾರಿ ಅಧಿಕಾರಿಗಳು ಬೇರೆ ಬೇರೆ ವಿಚಾರವನ್ನು ಮುಂದಿಟ್ಟುಕೊಂಡು ವಂಚಿಸುತ್ತಿರುವ ಘಟನೆ ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಅಧಿಕಾರಿಗಳು ದಿಢೀರ್ ರೈಡ್ ಮಾಡಿ ಅದೆಷ್ಟೋ ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡುತ್ತಲೇ ಇರುತ್ತಾರೆ. ಇದೀಗ ರೈಲ್ವೇ ಅಧಿಕಾರಿಯ ಮೇಲೆ ವಂಚನೆ ಆರೋಪವೊಂದು ಕೇಳಿಬಂದಿದೆ.

 

ಏನಿದು...? ಭ್ರಷ್ಟಾಚಾರ ಆರೋಪ..?

 

ರೈಲ್ವೇ ಇಲಾಖೆಯ ವಸತಿ ನಿಲಯದ ರಿಪೇರಿ ಹೆಸರಿನಲ್ಲಿ ಪ್ರತಿ ವರ್ಷ ಹಣ ಪೋಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸುಬ್ರಹ್ಮಣ್ಯ ರೋಡ್ ರೈಲ್ವೇ ವಸತಿ ನಿಲಯ ಹಳೆಯ ಕಟ್ಟಡವಾಗಿದ್ದು, ಇದಕ್ಕೆ ಈ ರೀತಿ ಪ್ರತಿ ವರ್ಷ ಹೊಸ ಶೀಟ್ ಅಳವಡಿಸಲಾಗುತ್ತಿದೆ. ಪ್ರತಿ ವರ್ಷ ಶೀಟ್ ಹಾಳಾಗದೇ ಇದ್ರೂ ಅದನ್ನು ಪುಡಿ ಮಾಡಿ ಮತ್ತೆ ಹೊಸ ಟೆಂಡರ್ ಕರೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

 

ಇದು ಅಧಿಕಾರಿಗಳ ಹಣ ಮಾಡುವ ಹುನ್ನಾರ...!!

 

ಅಧಿಕಾರಿಗಳು ಅನ್ಯ ಮಾರ್ಗದ ಮೂಲಕ ಹಣ ಲಪಟಾಯಿಸುವ ಒಂದಲ್ಲ ಒಂದು ಕುತಂತ್ರವನ್ನು ಹುಡುಕುತ್ತಲೇ ಇರುತ್ತಾರೆ. ಇದೊಂದು ಅಧಿಕಾರಿಗಳ ಹಣ ಮಾಡುವ ಹುನ್ನಾರವಾಗಿದ್ದು, ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ ವರ್ಷ ಹಾಕಿದ್ದ ಸಿಮೆಂಟ್ ಶೀಟ್ ಹಾಳಾಗದೇ ಇದ್ರೂ ಈ ಬಾರಿ ಮತ್ತೆ ಹೊಸ ಟೆಂಡರ್ ಕರೆಯಲಾಗಿದೆ. ಹಳೆಯ ಸಿಮೆಂಟ್ ಶೀಟ್ ಸರಿಯಾಗಿದ್ದರೂ ಅದನ್ನು ಪುಡಿ ಮಾಡಲಾಗುತ್ತಿದೆ. ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ನಮ್ಮಿಂದ ಕೂಡಾ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಈ ಕುರಿತು, ರೈಲ್ವೇ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.