ಬಾಂಗ್ಲಾದೇಶದ ಹಿಂದೂ ನಾಯಕ ಚಿನ್ಮಯ್ ಕೃಷ್ಣದಾಸ್ ಬಂಧನ!!;ಅಲ್ಲೋಲ ಕಲ್ಲೋಲವಾಯ್ತು ಬಾಂಗ್ಲಾದೇಶ..!!!

  • 28 Nov 2024 12:47:11 PM

ಬಾಂಗ್ಲಾದೇಶ:ಬಾಂಗ್ಲಾದೇಶದಲ್ಲಿ‌ ನೆಲೆಸಿರುವ ಹಾಗೂ ಹಿಂದೂ ಅಲ್ಪಸಂಖ್ಯಾತರ ಮುಖಂಡರಾಗಿದ್ದ ಇಸ್ಕಾನ್ ಸಂಸ್ಥೆಯ ನಾಯಕ ಚಿನ್ಮಯ್ ಕೃಷ್ಣದಾಸ್ ಅವರನ್ನು ಬಾಂಗ್ಲಾದ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ‌‌. ಇದರಿಂದಾಗಿ ಇಡೀ ಬಾಂಗ್ಲಾದೇಶದಲ್ಲಿ ಉಗ್ರ ಹೋರಾಟಗಳು ನಡೆಯುತ್ತಿದೆ.

 

ಹಿಂದೂ ಮುಖಂಡನ ದಿಢೀರ್ ಬಂಧನ!

 

ಬಾಂಗ್ಲಾದೇಶಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪರ ಸಾಕಷ್ಟು ಕೆಲಸಗಳನ್ನು ಮಾಡಿದ್ದ, ಹಿಂದೂಗಳ ಧ್ವನಿಯಾಗಿದ್ದ ಚಿನ್ಮಯ್ ಕೃಷ್ಣದಾಸ್ ಅವರನ್ನು ಇದೀಗ ಬಾಂಗ್ಲಾ ಪೊಲೀಸರು ದಿಢೀರ್ ಬಂಧಿಸಿದ್ದಾರೆ. ದೇಶ ತೊರೆಯಲು ವಿಮಾನ ನಿಲ್ದಾಣಕ್ಕೆ‌ ಬಂದಿಳಿದ ಚಿನ್ಮಯ್ ಅವರನ್ನು ಸೋಮಾವಾರ ಬಂಧಿಸಿ ಠಾಣೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ‌.

 

ಯಾರು ಈ ಚಿನ್ಮಯ್ ಕೃಷ್ಣದಾಸ್!

 

ದುರಾಡಳಿತದಿಂದ ಅವನತಿಯತ್ತ ಸಾಗುತ್ತಿರುವ ಹಾಗೂ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎನಿಸಿಕೊಂಡಿರುವ ಹಿಂದೂಗಳಿಗೆ ಹೆಗಲಾಗುವ ಹಿಂದೂ ಮುಖಂಡ ಚಿನ್ಮಯ್ ಕೃಷ್ಣ ದಾಸ್. ಇವರು ಹಿಂದೂ ಪರ ಪ್ರಮುಖ ವಕೀಲರು ಹಾಗೂ ಅಲ್ಲಿನ ಹಲವು ಹಿಂದೂ ಸಂಘಟನೆಗಳ ಮುಖಂಡರಾಗಿದ್ದಾರೆ. ಸದ್ಯ, ಇವರ ಬಂಧನವಾಗಿದ್ದು, ಬಾಂಗ್ಲಾದೇಶದ ರಾಜಧಾನಿಯಲ್ಲಿ ಇದರ ವಿರುಧ್ಧ ಉಗ್ರ ಹೋರಾಟಗಳು ನಡೆಯುತ್ತಿದೆ.