ರಿಪಬ್ಲಿಕ್ ಹಿಂದೂ:- ಸೈಬರ್ ಕ್ರೈಂನಂತಹ ಅಪರಾಧ ಪ್ರಕರಣಗಳು ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ. ಈ ಮಧ್ಯೆ ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಕೂಡಾ ಸ್ಪಾಮ್ ಕರೆಗಳು, ಮೆಸೇಜ್ ಗಳು ಬರೋದಂತೂ ಸಹಜ. ಆದರೆ ಇದರಿಂದ ಕೂಡಾ ಮೋಸ ಹೋಗುವ ಸಾಧ್ಯತೆ ಇರುತ್ತದೆ. ರೋಬೋಕಾಲ್ ನಂತಹ ತಂತ್ರಜ್ಞಾನ ಬಳಸಿ ವಂಚಿಸುತ್ತಾರೆ. ಈ ಕಾರಣಕ್ಕೆ ಗ್ರಾಹಕರ ಹಿತದೃಷ್ಟಿಯಿಂದ ಜಿಯೋ ನೂತನ ಫೀಚರ್ ಒಂದನ್ನು ಬಿಡುಗಡೆ ಮಾಡಿದೆ.
ಮೈ ಜಿಯೋ ಅಪ್ಲಿಕೇಶನ್ ಬಳಸಿ...!
ಈ ಅಪ್ಲಿಕೇಶನ್ ಮೂಲಕ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ಭಾಗಶಃ ನಿಯಂತ್ರಿಸಬಹುದು. ಕೆಲವು ಅನಗತ್ಯ ಜಾಹೀರಾತು ಕರೆಗಳನ್ನು ಬರದಂತೆ ನಿರ್ಬಂಧಿಸಲು ಆಯ್ಕೆಗಳು ಕೂಡಾ ಇದೆ. ಇದಕ್ಕಾಗಿ ನಾವು ಕೆಲವು ಹಂತಗಳನ್ನು ಬಳಸಬೇಕಾಗುತ್ತದೆ.
ಈ ಪ್ರಕ್ರಿಯೆಗಳನ್ನು ಫಾಲೋ ಮಾಡಿ...
ಜಿಯೋ ನೆಟ್ವರ್ಕ್ ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್ ಗಳು ಬರದಂತೆ ಕಡಿವಾಣ ಹಾಕಲು ನೀವು ಡು ನಾಟ್ ಡಿಸ್ಟರ್ಬ್ ಸರ್ವೀಸ್ ನ್ನು ಅಕ್ಟಿವೇಟ್ ಮಾಡಿಕೊಳ್ಳಬೇಕು. ಈ ಈಸಿ ಸೆಟ್ಟಿಂಗ್ ನ್ನು ಮಾಡಿಕೊಳ್ಳುವುದರಿಂದ ಅನಗತ್ಯ ಕರೆಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಬಳಕೆದಾರರು ಡಿಎನ್ ಡಿ ಸರ್ವೀಸ್ ನ್ನು ಕಸ್ಟಮೈಸ್ ಕೂಡಾ ಮಾಡಬಹುದಾಗಿದೆ. ಇದಲ್ಲದೆ ಇದರಲ್ಲಿ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಸಂಬಂಧಿ ಆಯ್ಕೆಗಳು ಕೂಡಾ ಇದೆ.