ಉಜಿರೆಯಲ್ಲಿ ಅಕ್ರಮ ಗೋಸಾಗಾಟ: ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆಯಲ್ಲಿ 4 ಗೋವುಗಳ ರಕ್ಷಣೆ!!

  • 28 Nov 2024 09:07:06 PM

ಉಜಿರೆ: ನ.28ರಂದು ಸಂಜೆ ಉಜಿರೆಯಲ್ಲಿ ಭಜರಂಗದಳದ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳನ್ನು ರಕ್ಷಿಸಲು ಸಾಧ್ಯವಾಗಿದೆ. ಉಜಿರೆಯ ಗುರಿಪಳ್ಳ ಎಂಬಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದರು.

 

 ಈ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ಗೂಡ್ಸ್ ವಾಹನವನ್ನು ತಡೆದು ನಿಲ್ಲಿಸಿ ಗೋವುಗಳ ರಕ್ಷಣೆಯನ್ನು ಮಾಡಿದ್ದಾರೆ. ರಕ್ಷಣೆಗೊಂಡ ಗೋವುಗಳನ್ನು ಬೆಳ್ತಂಗಡಿ ಠಾಣೆಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.