ರಾಮೇಶ್ವರಂ‌ ಕೆಫೆ‌ ಸ್ಪೋಟಿಸಿದ ಆರೋಪಿಯ ಸ್ಪೋಟಕ ಸತ್ಯ ಬಯಲು!;ಬ್ಲಾಸ್ಟ್ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಆರೋಪಿ!

  • 29 Nov 2024 12:47:28 PM

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ರಾಮೇಶ್ವರಂ‌ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಈಗಾಗಲೇ ಎನ್.ಐ.ಎ ಕೈಗೆತ್ತಿಕೊಂಡಿದೆ. ಸದ್ಯ, ಈ ತನಿಖೆಯಿಂದ ಸ್ಪೋಟಕ ವಿಚಾರವೊಂದು ಬೆಳಕಿಗೆ ಬಂದಿದ್ದು, ಹಿಂದೂ ಹೆಸರಿನಲ್ಲಿ ದೇಶ ದ್ರೋಹ ಮಾಡುವ ಉದ್ದೇಶ ಆರೋಪಿಗೆ ಇತ್ತು ಎನ್ನುವ ಅನುಮಾನ ಮೂಡಲಾರಂಭಿಸಿದೆ.

ಹಿಂದೂ ಹೆಸರಿನಲ್ಲಿ‌ ದೇಶದ್ರೋಹ!

 

ರಾಮೇಶ್ವರಂ‌ ಕೆಫೆ ಸ್ಪೋಟಿಸಿದ ಬಳಿಕ ಆರೋಪಿ ಮುಸಾವೀರ್ ಕೋಲ್ಕತ್ತಾದಲ್ಲಿ ತಲೆ ಮರೆಸಿಕೊಂಡಿದ್ದ. ಜೊತೆಗೆ ಕೊಲ್ಕತ್ತಾದಲ್ಲಿ ಹಿಂದೂ ಹೆಸರು ಹೇಳಿಕೊಂಡು ಓಡಾಡುತ್ತಿದ್ದ, ಈ ಮೂಲಕ ಹಿಂದೂ ಹೆಸರಿನಲ್ಲಿ ದೇಶದ್ರೋಹ ಮಾಡಿದ್ದ ಎನ್ನುವ ಸ್ಪೋಟಕ ಸತ್ಯ ಬಯಲಾಗಿದೆ.

ಬಾಂಬ್ ಸ್ಪೋಟಿಸಿ ಮಸೀದಿಗೆ ತೆರಳಿದ್ದ ಆರೋಪಿ!

ಇದಿಷ್ಟು ಮಾತ್ರವಲ್ಲದೇ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಬಳಿಕ ಆರೋಪಿ ಮುಸಾವೀರ್ ಪಕ್ಕದಲ್ಲೇ ಇದ್ದ ಮಸೀದಿಯೊಂದಿಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದ ಎನ್ನುವ ಸತ್ಯ ಕೂಡ ಇದೀಗ ತನಿಖೆಯಿಂದ ಬಯಲಾಗಿದೆ.