ಬೆಳ್ತಂಗಡಿ: ಯವ್ವನದಲ್ಲಿ ಪ್ರೇಮಪಾಶಕ್ಕೆ ಸಿಲುಕಿ ಜೀವನವನ್ನೇ ಅಂತ್ಯಗೊಳಿಸುತ್ತಿರುವ ಯುವತಿಯರ ಸಂಖ್ಯೆ ದಿನೇ ದಿನೆ ಹೆಚ್ಚಾಗಿತ್ತಿದೆ. ಸದ್ಯ, ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನಲ್ಲಿ ನ.20 ರಂದು ಇಲಿಪಾಷಾಣ ಸೇವಿಸಿ ಆತ್ಮಯತ್ಯೆಗೆ ಹತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಹೃಷ್ವಿ (17) ಆತ್ಮಹತ್ಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭ್ಯವಾಗಿದ್ದು, ಯುವತಿಯ ಸಾವಿನ ಹಿಂದೆ ಪ್ರಿಯಕರನ ಕೈವಾಡವಿದೆ ಎನ್ನಲಾಗಿದೆ.
ಯುವಕನ ಮೋಸದಾಟಕ್ಕೆ ಯುವತಿ ಬಲಿ!
ಚಾರ್ಮಾಡಿಯ ಪ್ರವೀಣ್ ಎಂಬಾತನನ್ನು ಮಿತ್ತಬಾಗಿಲು ನಿವಾಸಿ ಹೃಷ್ವಿ ಪ್ರೀತಿಸುತ್ತಿದ್ದಳು. ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರವೀಣ್ ಯುವತಿಯೊಂದಿಗೆ ತಿರುಗಾಡುತ್ತಿದ್ದ. ಆದರೆ ಇತ್ತೀಚೆಗೆ ವರಸೆ ಬದಲಿಸಿದ ಯುವಕ ಇಲ್ಲಸಲ್ಲದ ಕಾರಣ ಹೇಳಿ ಯುವತಿಯಿಂದ ದೂರವಾಗಲು ಪ್ರಯತ್ನಿಸುತ್ತಿದ್ದ. ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುವ ಎನ್ನುತ್ತಿದ್ದ. ಇದರಿಂದ ಬೇಸತ್ತ ಯುವತಿ ನ.20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಯುವಕ ಪರಾರಿ, ಪ್ರಕರಣ ದಾಖಲು!
ಯುವಕನ ಮೋಸದಾಟದಿಂದ ರೋಸಿ ಹೋದ ಯುವತಿ ಸಾವಿಗೆ ಶರಣಾಗಿದ್ದಾಳೆ. ಇತ್ತ ಯುವತಿಯ ಸಾವಿನ ವಿಚಾರ ಗೊತ್ತಾಗುತ್ತಿದ್ದಂತೆ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.ಸದ್ಯ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹೃಷ್ವಿ ಪ್ರಿಯಕರ ಪ್ರವೀಣ್ ವಿರುದ್ಧ ಪ್ರಕರಣ ದಾಖಲಾಗಿದೆ.