ಪುತ್ತೂರು ಪೊಲೀಸರ ಮಿಂಚಿನ‌ ಕಾರ್ಯಾಚರಣೆ!;ನಿಷೇಧಿತ ಎಂಡಿಎಂಎ ಸಾಗಿಸುತ್ತಿದ್ದ ಮುಸ್ತಫಾ ಅಂದರ್!

  • 29 Nov 2024 01:52:19 PM


ಪುತ್ತೂರು : ಮಾರಾಟದ ಉದ್ದೇಶದಿಂದ ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ನ.27 ರಂದು ಪುತ್ತೂರು ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ಬಂಧಿಸಲಾಗಿದೆ. ಆರೋಪಿಯನ್ನು ಪುತ್ತೂರು ಕಸ್ಬಾ ನಿವಾಸಿ ಮೊಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ.

 

ವಾಹನ ತಪಾಸಣೆ ವೇಳೆ ಆರೋಪಿ ಬಲೆಗೆ!

 

ಪುತ್ತೂರಿನ ಕಬಕ ಗ್ರಾಮದ ಪೊಳ್ಯದಲ್ಲಿ ನ.27 ರಂದು ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಯುತ್ತಿತ್ತು ಈ ವೇಳೆ ಪುತ್ತೂರು ಪೇಟೆಯ ಕಡೆಗೆ ಸಾಗುತ್ತಿದ್ದ ಬೈಕನ್ನು ನಿಲ್ಲಿಸಲಾಗಿದೆ. ಬೈಕ್ ತಪಾಸಣೆ ಮಾಡಿದಾಗ ನಿಷೇಧಿತ ಎಂಡಿಎಂಎ ಇರುವುದು ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ಆರೋಪಿ ಮುಸ್ತಫಾ ಮಾರಾಟದ ಉದ್ದೇಶದಿಂದ ಮಾದಕ ವಸ್ತು ಸಾಗಿಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

 

ಪ್ರಕರಣ ದಾಖಲು!

 

ನಿಷೇಧಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಮುಸ್ತಫಾ ಬಳಿಯಿಂದ ಒಂದು ಬೈಕ್ ಮತ್ತು 7.600 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.