ಚಿತ್ರದುರ್ಗ: ಸಿನಿಮಾ ಶೂಟಿಂಗ್ ಅಂದ್ರೆ ಸಾಮಾನ್ಯವೇನಲ್ಲ. ಡ್ರೋನ್ ಚಿತ್ರೀಕರಣ ಇದ್ದರಂತೂ ಅತ್ಯಂತ ಜಾಗರೂಕತೆಯಿಂದ ಮಾಡಬೇಕಾಗುತ್ತದೆ. ಇದೀಗ ಕಲ್ಟ್ ಚಿತ್ರತಂಡದ ಯಡವಟ್ಟಿನಿಂದ ಸಚಿವ ಜಮೀರ್ ಅಹ್ಮದ್ ಪುತ್ರ ನಟ ಜೈನ್ ಖಾನ್ ವಿರುದ್ಧ ಕೇಸು ದಾಖಲಾಗಿದೆ.
ಏನಿದು ಪ್ರಕರಣ...?
ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದರಲ್ಲಿ ಸಂತೋಷ್ ಎಂಬಾತ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಟಿನ್, ಯುವ ಸೇರಿದಂತೆ ಇವರು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸಾಲ ಮಾಡಿ ಇವರು ಸ್ವಂತದೊಂದು ಡ್ರೋನ್ ಖರೀದಿಸಿದ್ದರು. ಇದರಲ್ಲೇ ಶೂಟಿಂಗ್ ಕೂಡಾ ನಡೆಸಲಾಗುತ್ತಿತ್ತು. ಆದರೆ ಅಸಾಧ್ಯವಾದ ಸ್ಥಳದಲ್ಲಿ ಡ್ರೋನ್ ಶೂಟ್ ತೆಗೆಯಲು ಹೇಳಿದ ನಿರ್ದೇಶಕರಿಗೆ ಎಷ್ಟು ಹೇಳಿದರೂ ಕೇಳದೆ ಒತ್ತಾಯ ಮಾಡಿದ್ದರು. ಇದರಿಂದ ಡ್ರೋನ್ ವಿಂಡ್ ಫ್ಯಾನ್ ಗೆ ಟಚ್ ಆಗಿ ತುಂಡು ತುಂಡಾಗಿತ್ತು. ಪರಿಹಾರ ನೀಡುವಂತೆ ಆತ ಕೇಳಿಕೊಂಡರೂ ಚಿತ್ರತಂಡ ಮಾತ್ರ ಆತನಲ್ಲಿ ಕೆಟ್ಟ ರೀತಿಯಲ್ಲಿ ವರ್ತಿಸಿದೆ.
ವೈಟ್ ಪೇಪರ್ ಮೇಲೆ ಸೈನ್ ಪಡೆದುಕೊಂಡಿದ್ದ ಝೈದ್ ಖಾನ್..!
ಆ ಡ್ರೋನ್ ನಲ್ಲಿ ತೆಗೆದಿದ್ದ ಒಂದೂವರೆ ಲಕ್ಷ ಮೌಲ್ಯದ ಫೂಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡನ್ನು ಜೈದ್ ಖಾನ್ ಆತನಿಂದ ಕಿತ್ತುಕೊಂಡಿದ್ದ ಅಷ್ಟೇ ಅಲ್ಲದೆ ಬಿಳಿ ಹಾಳೆಯ ಮೇಲೆ ಸಹಿ ಕೂಡಾ ಪಡೆದುಕೊಂಡಿದ್ದಾನೆ. ಪರಿಹಾರವನ್ನೂ ನೀಡದೆ ಮನಬಂದಂತೆ ಅವಮಾನಿಸಿದ್ದಾರೆ. ಇದೇ ಕಾರಣಕ್ಕೆ ಮನನೊಂದು ಸಂತೋಷ್ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ ಝೈದ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.