ವಕ್ಫ್ ಬೋರ್ಡ್ ರದ್ದುಮಾಡಿ ಆಂಧ್ರ ಸರಕಾರದ ಆದೇಶ!!!!

  • 01 Dec 2024 07:44:13 PM

ಹೈದರಾಬಾದ್: ದೇಶಾದ್ಯಂತ ವಕ್ಫ್ ಮಂಡಳಿ ವಿರುದ್ಧ ಜನರ ಪ್ರತಿಭಟನೆ ನಡೆಯುತ್ತಿದೆ. ಅದರನುಸರವಾಗಿ ಆಂಧ್ರಪ್ರದೇಶ ಸರ್ಕಾರವು ವಕ್ಫ್ ವಿಸರ್ಜನೆ ಮಾಡಿ ಮಹತ್ತರದ ಹೆಜ್ಜೆ ಇಟ್ಟಿದೆ. ವಕ್ಫ್ ಮಂಡಳಿಯನ್ನು ವಿಸರ್ಜಿಸಿ ಜಿಓ 75 ಅನ್ನು ಜಾರಿಗೊಳಿಸಿದೆ.ಹಿಂದಿನ ಸರಕಾರ ಜಾರಿಗೊಳಿಸಿದ್ದ ಜಿವಿಒ-47 ಅನ್ನು ರದ್ದುಪಡಿಸಿ ಪ್ರಸ್ತುತ ಸಮ್ಮಿಶ್ರ ಸರ್ಕಾರವು ಜಿವಿಒ-75 ಅನ್ನು ಹೊರಡಿಸಿದೆ ಎಂದು ರಾಜ್ಯ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎನ್.ಡಿ.ಫಾರೂಕ್ ಅವರು ಹೇಳಿದರು. 

 

ಹಿಂದಿನ ಸರ್ಕಾರದ ಅವಧಿಯಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದ ಕೆಲವು ಕಾನೂನು ಸಮಸ್ಯೆಗಳಿಂದ ಸಮ್ಮಿಶ್ರ ಸರ್ಕಾರವು ಹೊಸ ಜಿವಿಒ ಸಂಖ್ಯೆ 75 ಅನ್ನು ಹೊರಡಿಸಲು ಕಾರಣ ಎಂದು ತಿಳಿಸಿದರು. ಮುಖ್ಯಮಂತ್ರಿಗಳಾದ ನಾರಾ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಮೈತ್ರಿ ಸರ್ಕಾರವು ವಕ್ಫ್ ಆಸ್ತಿಗಳ ನಿರ್ವಹಣೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಾಗಿದೆಯೆಂದು ಸಚಿವ ಎನ್.ಎನ್.ಡಿ. ಫಾರೂಕ್ ಅವರು ಹೇಳಿದರು.