ನಾಗಪುರ : ದೇಶದಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಇದಕ್ಕೆ ದೇಶದಲ್ಲಿ ನಡೆಯುತ್ತಿರುವ ಗಲಭೆಗಳು ಒಂದು ಕಾರಣವಾದರೆ ಅದೆಷ್ಟೋ ಮಹಿಳೆಯರು ಸಂತಾನೋತ್ಪತ್ತಿ ತೊಂದರೆಯನ್ನು ಅನುಭವಿಸುತ್ತಿರುವುದು ಕೂಡಾ ಮತ್ತೊಂದು ಕಾರಣವಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಂಠಿತವಾಗಿಸಿ ಅಧಿಕಾರದ ಗದ್ದುಗೆಯೇರಿ ದೇಶ ಕೊಳ್ಳೆಹೊಡೆಯುವುದು ಅನ್ನಯಮತೀಯ ಕುತಂತ್ರಿಗಳ ಉದ್ದೇಶ. ಇದನ್ನು ನಿರ್ಲಕ್ಷಿಸುತ್ತಾ ಹೋದರೆ ಸನಾತನ ಪರಂಪರೆಯ ನಮ್ಮ ದೇಶ ಮತ್ತೊಂದು ಧರ್ಮದ ಕೈಸೇರುವುದು ಅಂತೂ ಖಂಡಿತ ಎಂದು ಆರೆಸ್ಸೆಸ್ ಸಂಘಚಾಲಕ ಮೋಹನ್ ಭಾಗವತ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತೀ ಕುಟುಂಬ 3 ಮಕ್ಕಳನ್ನು ಪಡೆಯೋದು ಅಗತ್ಯ- ಮೋಹನ್ ಭಾಗವತ್...!!
ನಾಗಪುರದಲ್ಲಿ ನಡೆದ ಕಥಾಲೆ ಕುಲ್ ಸಮ್ಮೇಳನದಲ್ಲಿ ಮಾತನಾಡಿದ ಆರೆಸ್ಸೆಸ್ ಸಂಘಸಂಚಾಲಕ ಮೋಹನ್ ಭಾಗವತ್ ಅವರು ದೇಶದಲ್ಲಿ ಜನಸಂಖ್ಯೆ ಕುಸಿತವಾಗುತ್ತಿರುವುದರ ಬಗ್ಗೆ ಅದರಲ್ಲೂ ವಿಶೇಷವಾಗಿ ಹಿಂದೂ ಸಮಾಜದ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ಶಾಸ್ತ್ರದ ಪ್ರಕಾರ ದೇಶದಲ್ಲಿ ಫಲವತ್ತತೆಯ ದರ ಕನಿಷ್ಠ 3 ಇರಬೇಕು. ಪ್ರತೀ ಕುಟುಂಬ ಕನಿಷ್ಠ ಮೂರು ಮಕ್ಕಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇದು 2.1ಕ್ಕಿಂತ ಕಡಿಮೆಯಾದರೆ ಅಂಥ ಸಮಾಜ ನಾಶವಾಗಲು ಬಾಹ್ಯ ಶಕ್ತಿಯ ಅಗತ್ಯವೇ ಇಲ್ಲ, ತನ್ನಿಂತಾನೇ ಅದು ನಶಿಸಿಹೋಗುತ್ತದೆ. ಇದನ್ನು ತಡೆಯಲು ಸಮಾಜದ ಪ್ರತೀ ಕುಟುಂಬವೂ ಕೊಡುಗೆ ನೀಡಬೇಕು. ನಮ್ಮಲ್ಲಿ ಹಲವಾರು ಭಾಷೆಗಳು ಹಾಗೂ ಸಂಸ್ಕೃತಿಗಳು ನಶಿಸಿ ಹೋಗಿದ್ದು ಕೂಡ ಹೀಗೆಯೇ. ಆದರೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ.
ಗರ್ಭನಿರೋಧಕ ಬಳಸುವಿಕೆ ಪ್ರಮಾಣ ಹೆಚ್ಚಾಗಿರೋದು ವಿಷಾದನೀಯ...!!!
ಭಾರತ ಸಂಸ್ಕೃತಿ, ಸಂಪ್ರದಾಯಕ್ಕೆ ವಿಶೇಷವಾದ ಆದ್ಯತೆ ನೀಡುವ ರಾಷ್ಟ್ರ. ಆದರೆ ಇಲ್ಲಿ ಸಂಸ್ಕೃತಿಯ ಎಲ್ಲೆ ಮೀರಿ ಜನ ಶಿಸ್ತನ್ನು ಮರೆಯುತ್ತಿದ್ದಾರೆ. ಅಪ್ರಾಪ್ತರು ಕೂಡಾ ಗರ್ಭನಿರೋಧಕ ಬಳಸುವುದು ಮಾತ್ರ ಖಂಡನೀಯ. ಈ ಬಗ್ಗೆ ಶೀಘ್ರವೇ ಹಿಂದೂಸಮಾಜ ಎಚ್ಚೆತ್ತುಕೊಳ್ಳಬೇಕು. ಜನಸಂಖ್ಯಾ ನೀತಿಯೂ ಫಲವತ್ತತೆಯ ದರ 2.1ಕ್ಕಿಂತ ಕಡಿಮೆ ಆಗಬಾರದು ಎನ್ನುತ್ತದೆ. ಇಲ್ಲಿ 2.1 ಎಂದರೆ 2ಕ್ಕಿಂತ ಹೆಚ್ಚು, ಅಂದರೆ ಕನಿಷ್ಠ 3 ಮಕ್ಕಳು ಪಡೆಯಬೇಕು ಎಂದು ಜನಸಂಖ್ಯಾಶಾಸ್ತ್ರ ಹೇಳುತ್ತದೆ. ಆದರೆ 2021ರಲ್ಲಿ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಈಗ ಭಾರತದಲ್ಲಿ ಮಹಿಳೆಯೊಬ್ಬಳು ಮಕ್ಕಳಿಗೆ ಜನ್ಮ ನೀಡುವ ಸರಾಸರಿ ಪ್ರಮಾಣ 2.2ರಿಂದ 2ಕ್ಕೆ ಇಳಿದಿದೆ. ಈ ಕಡೆ ಶೇಕಡ 54 ಇದ್ದ ಗರ್ಭ ನಿರೋಧಕ ಬಳಸು ವಿಕೆಯ ಪ್ರಮಾಣ ಶೇ.67ರಷ್ಟಾಗಿದೆ. ಇದಕ್ಕೆ ಮಾರಣ ಏನು...? ದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಏನು ಕಾರಣ ಎಂಬುವುದರ ಕುರಿತು ಅವಲೋಕಿಸಬೇಕು. ನಿಜಕ್ಕೂ ಇದು ಅಚ್ಚರಿ' ಎಂದು ಭಾಗವತ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.