ದ.ಕ: ಬಿಟ್ಟಿ ಬಾಗ್ಯಗಳಿಗೆ ಹಣ ಹೊಂದಿಸಲಾಗದೆ ಕಂಗಾಲಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ತಲೆನೋವಾಗಿ ಪರಿಣಮಿಸಿದೆ. ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಇದೀಗ ಜಿಲ್ಲೆಯ ಪ್ರಮುಖ ಮುಖಂಡರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಕಾಂಗ್ರೆಸ್ ಕಛೇರಿಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ-ಸದಸ್ಯನ ನಡುವೆ ಡಿಶ್ಯೂಂ, ಡಿಶ್ಯೂಂ!
ಮೊನ್ನೆಯಷ್ಟೇ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಗೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಾರ್ಯವೈಖರಿಯ ಬಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಬೆ ಪ್ರಕಾಶ್ ಚಂದ್ರ ಶೆಟ್ಟಿ ಅಪಸ್ವರ ಎತ್ತಿದ್ದಾರೆ. ಇದೇ ಮಾತು ತಾರಕಕ್ಕೇರಿ ಹರೀಶ್ ಕುಮಾರ್ ಹಾಗೂ ಚಂದ್ರ ಪ್ರಕಾಶ್ ಕಾಂಗ್ರೆಸ್ ಕಚೇರಿಯಲ್ಲೇ ಹೊಡೆದಾಡಿಕೊಂಡಿದ್ದಾರೆ.
ಗಲಾಟೆ ನಿಲ್ಲಿಸಲು ಪೊಲೀಸರ ಹರಸಾಹಸ!
ಮಾತಿಗೆ ಮಾತು ಬೆಳೆದು ಹರೀಶ್ ಕುಮಾರ್ ಹಾಗೂ ಚಂದ್ರ ಪ್ರಕಾಶ್ ಶೆಟ್ಟಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕಾಂಗ್ರೆಸ್ ಕಛೇರಿ ರಣಾಂಗಣದಂತಾಗಿತ್ತು. ಇಬ್ಬರ ಗಲಾಟೆ ನಿಲ್ಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೆ ನಡೆದಿರುವ ಗಲಾಟೆಯ ವಿಚಾರವನ್ನು ಚಂದ್ರ ಪ್ರಕಾಶ್ ಶೆಟ್ಟಿ ತಳ್ಳಿಹಾಕಿದ್ದಾರೆ. ಸದ್ಯ, ಗಲಾಟೆಯ ಫೋಟೋ ವೈರಲ್ ಆಗುತ್ತಿದೆ.