ವಿಶ್ವ ಹಿಂದೂ ಪರಿಷತ್ ಬಜರಂಗದಳ ಬದಿಯಡ್ಕ ಪ್ರಖಂಡ ಇದರ ವತಿಯಿಂದ ಬದಿಯಡ್ಕದಲ್ಲಿ ದಿನಾಂಕ 02/11/2024 ರಂದು ಸಾಮೂಹಿಕ ಗೋಪೂಜೆ- ಆಮಂತ್ರಣ ಪತ್ರಿಕೆ ಬಿಡುಗಡೆ

  • 20 Oct 2024 09:11:37 PM

ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ದಿನಾಂಕ 2.11.2024 ನೇ ಶನಿವಾರ ಬದಿಯಡ್ಕದಲ್ಲಿ ನಡೆಯಲಿರುವ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಂದು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಉದ್ಯಮಿ ಹಾಗೂ ಧಾರ್ಮಿಕ ಮುಂದಾಳು ಶ್ರೀ ಎಸ್ ಎನ್ ಮಯ್ಯ ಬದಿಯಡ್ಕ ಬಿಡುಗಡೆಗೊಳಿಸಿದರು. 

 

ಶ್ರೀ ಮಂಜುನಾಥ ಮಾನ್ಯ ಜಿಲ್ಲಾ ಸಾಮಾಜಿಕ ಸಾಮರಸ್ಯ ಪ್ರಮುಖ್ ಕಾರ್ಯಕ್ರಮಕ್ಕೆ ಸ್ವಾಗತ ಭಾಷಣದ ಮೂಲಕ ಸ್ವಾಗತಿಸಿದರು .ಶ್ರೀ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಪ್ರಾಂತ ಸತ್ಸಂಗ ಸಹ ಸಂಯೋಜಕ , ಶ್ರೀ ಲಕ್ಷ್ಮಣ ಪ್ರಭು ಬದಿಯಡ್ಕ ಶುಭಾಸಂಸನೆ ಗೈದರು. 

 

ಶ್ರೀ ಹರಿಪ್ರಸಾದ್ ರೈ ಪುತ್ರಕಳ ಜಿಲ್ಲಾ ಪ್ರಮುಖ್ ,ಶ್ರೀ ನರೇಂದ್ರ ಬದಿಯಡ್ಕ ಧಾರ್ಮಿಕ ಮುಂದಾಳು , ಶ್ರೀ. ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ವಿ ಹಿಂ ಪ ಅಧ್ಯಕ್ಷರು ಕುಂಬಡಾಜೆ ಖಂಡ ಸಮಿತಿ , ಶ್ರೀ ಸುನಿಲ್ ಕಿನ್ನಿಮಾಣಿ ವಿಹಿಂಪ ಪ್ರಖಂಡ ಅಧ್ಯಕ್ಷರು ಉಪಸ್ಥಿತರಿದ್ದರು ಶ್ರೀರಮೇಶ್ ಕೃಷ್ಣ ಪದಾರ್ ಪ್ರಖಂಡ ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು.