ದಿ‌ ಸಬರಮತಿ ರಿಪೋರ್ಟ್ ಸಿನಿಮಾ‌ ವೀಕ್ಷಿಸಿದ ಕೇಂದ್ರ ಬಿಜೆಪಿ ದಂಡು!;ಸಿನಿಮಾ‌ ನೋಡಿ ಕಣ್ಣೀರಿಟ್ಟ ಮೋದಿ!

  • 03 Dec 2024 10:01:03 AM

ಡಿಸೆಂಬರ್ 2- ಸಾಮಾನ್ಯವಾಗಿ ಗತಕಾಲದಲ್ಲಿ ನಡೆದ ಅದೆಷ್ಟೋ ಆಸಕ್ತಿಕರ ನೈಜ ವಿಚಾರಗಳನ್ನು ಮುಂದಿಟ್ಟುಕೊಂಡು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. ಅದರಲ್ಲೂ ಹಿಂದೂಗಳ ಮೇಲೆ ನಡೆದಂತಹ ಆಕ್ರಮಣ, ದಾಳಿ, ದಬ್ಬಾಳಿಕೆಯನ್ನು ಕಣ್ಣಿಗೆ ಕಟ್ಟುವಂತೆ ಕೆಲವು ಚಲನಚಿತ್ರಗಳು ಕೂಡಾ ರಿಲೀಸ್ ಆಗಿದೆ. ಇದೀಗ ಸಿನಿಮಾವೊಂದನ್ನು ನೋಡಿ ದೇಶದ ಪ್ರಧಾನಿ ಮೋದಿ ಅವರು ಭಾವುಕರಾದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 

`ದಿ ಸಾಬರಮತಿ ರಿಪೋರ್ಟ್' ಸಿನಿಮಾ ವೀಕ್ಷಿಸಿದ ಪ್ರಧಾನಿ ಮೋದಿ....

 

ಗುಜರಾತ್‌ನ 2002ರ ಗೋಧ್ರಾ ಹತ್ಯಾಕಾಂಡದ ವಿಚಾರವನ್ನು ಕಥಾವಸ್ತುವನ್ನಾಗಿಟ್ಟುಕೊಂಡು ನಿರ್ಮಾಣ ಮಾಡಲಾಗಿರುವ “ದ ಸಾಬರ್‌ಮತಿ ರಿಪೋರ್ಟ್‌’ ಸಿನಿಮಾವನ್ನು ಪ್ರಧಾನಿ ಮೋದಿಯವರು ಸೋಮವಾರ ಸಂಸತ್‌ ಭವನದ “ಬಾಲಯೋಗಿ ಅಡಿಯೋರಿಯಂ’ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ನೋಡುತ್ತಾ ಕೆಲವು ದೃಶ್ಯಗಳನ್ನು ನೋಡಿ ಅವರು ಭಾವುಕರಾಗಿದ್ದಾರೆ. ಪ್ರಧಾನಿ ಮೋದಿ ಈ ಸಿನಿಮಾ ನೋಡಿದ ಮೇಲೆ ರಾಜ್ಯದಲ್ಲಿ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.

 

ಈ ಸಿನಿಮಾ ನೋಡಿ ಪ್ರಧಾನಿ ಹೇಳಿದ್ದೇನು...? 

 

ದಿ ಸಾಬರಮತಿ ರಿಪೋರ್ಟ್ ಸಿನಿಮಾವನ್ನು ವೀಕ್ಷಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದು ನಿಜ. ಸಿನಿಮಾ ನೋಡಿ ಟ್ವೀಟ್ ಮಾಡಿದ ಅವರು ` ಎನ್‌ಡಿಎ ಸಂಸದರ ಜತೆಗೆ ಸಾಬರ್‌ಮತಿ ರಿಪೋರ್ಟ್‌ ಸಿನಿಮಾ ನೋಡಿದೆ. ಅತ್ಯಂತ ಸಂತೋಷವಾಯಿತು. ನೈಜ ಘಟನೆಯನ್ನು ಮುಂದಿಟ್ಟುಕೊಂಡು ವೀಕ್ಷಕರ ಮನಮುಟ್ಟುವಂತೆ ಚಿತ್ರೀಕರಿಸಿದ್ದಾರೆ. ಸಿನಿಮಾ ತಂಡದ ಪ್ರಯತ್ನ ನಿಜಕ್ಕೂ ಶ್ಲಾಘನೀಯ’ ಎಂದಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿರುವ ವಿಕ್ರಾಂತ್‌ ಮೆಸ್ಸಿ, ನಿರ್ಮಾಪಕಿ ಏಕ್ತಾ ಕಪೂರ್‌ ತಂದೆ ಜಿತೇಂದ್ರ ಮತ್ತಿತರರು ಉಪಸ್ಥಿತರಿದ್ದು ಸಿನಿಮಾ ಪ್ರೇಮಿಗಳಿಗೆ ಮುಖ್ಯ ಆಕರ್ಷಿತರಾದರು. ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಸಚಿವರಾದ ಅಮಿತ್‌ ಶಾ, ನಿರ್ಮಲಾ, ಅಶ್ವಿ‌ನಿ ವೈಷ್ಣವ್‌, ಗಡ್ಕರಿ, ನಡ್ಡಾ ಸೇರಿ ಪ್ರಮುಖರು ಈ ಸಂದರ್ಭದಲ್ಲಿ ಜೊತೆಗಿದ್ದರು.