ಬೆಳ್ತಂಗಡಿಯಲ್ಲೊಂದು‌ ಧಾರುಣ ಘಟನೆ!; RSS ಪ್ರಚಾರಕ ನದಿಗೆ ಬಿದ್ದು ಸಾವು!

  • 03 Dec 2024 04:43:42 PM

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲೊಂದು ಧಾರುಣ ಘಟನೆ ಬೆಳಕಿಗೆ ಬಂದಿದ್ದು, RSS ಪ್ರಚಾರಕರೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ‌. ಮೃತರನ್ನು ಬೆಳಾಲು ಸುರಿಳಿ ಕುಂಡಡ್ಕ ನಿವಾಸಿ 38 ವರ್ಷ ಪ್ರಾಯದ ಪ್ರಾಸಾದ್ ಎಂದು ಗುರುತಿಸಲಾಗಿದೆ.

 

ನೇತ್ರಾವತಿ ನದಿಗೆ ಇಳಿದಿದ್ದ ಪ್ರಸಾದ್!

 

ಬೆಳ್ತಂಗಡಿ ವಲಯದ RSS ಪ್ರಚಾರಕರಾಗಿದ್ದ ಪ್ರಸಾದ್ ಓರ್ವ ಉತ್ಸಾಹಿ ತರುಣರಾಗಿದ್ದರು. ಡಿ.2ರ ಸೋಮವಾರ ಪ್ರಸಾದ್ ನೇತ್ರಾವತಿ ನದಿಗೆ ಇಳಿದು ಬಳಿಕ ಕಣ್ಮರೆಯಾಗಿದ್ದರು. ಪ್ರಸಾದ್ ನದಿಗೆ ಇಳಿದದ್ದು ಯಾಕೆ ಎಂಬುದರ ಬಗ್ಗೆ ಯಾವುದೇ ಉತ್ತರಗಳು‌ ಲಭ್ಯವಾಗಿಲ್ಲ.

 

ರಾತ್ರಿ 11 ಗಂಟೆಗೆ ಮೃತದೇಹ ಪತ್ತೆ!

 

ಪ್ರಸಾದ್ ನೇತ್ರಾವತಿ ನದಿಗೆ ಇಳಿದು ಕಾಣೆಯಾದ ಬಗ್ಗೆ ಮಾಹಿತಿ‌ ತಿಳಿದ ಕೂಡಲೇ ಸಾಕಷ್ಟು ಜನ ನದಿಯ ಪಕ್ಕ ಹುಡುಕಾಡಿದ್ದಾರೆ. ಬಳಿಕ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ಕಾರ್ಯಾಚರಣೆಯಿಂದಾಗಿ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಪ್ರಸಾದ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.