ಫೆಂಗಲ್ ಚಂಡಮಾರುತದ ಪ್ರಭಾವ: ನೀಲಾವರದಲ್ಲಿ ಭಾರಿ ಮಳೆ !!!!! ಸಿಡಿಲು ಬಡಿದು ಮನೆ ಹಾನಿ!!!!

  • 03 Dec 2024 10:41:37 PM

ಉಡುಪಿ: ಫೆಂಗಾಲ್ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರದಿಂದ ಮೋಡ ಕವಿದ ವಾತಾವರಣವಿದ್ದು ಸಂಜೆಯಿಂದ ಹಲವು ಕಡೆಗಳಲ್ಲಿ ಸಿಡಿಲಿನ ಅಬ್ಬರದೊಂದಿಗೆ ಏರಬರಿ ಮಳೆಯಾಗಿದೆ.ಸಿಡಿಲಿನ ಅಬ್ಬರಕ್ಕೆ ಬ್ರಹ್ಮಾವರದ ನೀಲಾವರ ಎಂಬಲ್ಲಿ ನಿನ್ನೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಯುಂಟಾದ ಘಟನೆ ನಿನ್ನೆ ನಡೆದಿದೆ.

 

 

 

 ನೀಲಾವರ ಸೊಣಗಾರಬೆಟ್ಟು ರಾಧು ಶೆಡ್ತಿಯವರ ಮನೆಗೆ ಗಂಭೀರ ಹಾನಿಉಂಟಾಗಿದೆ. ಮನೆಯ ವಿದ್ಯುತ್ ವೈರಿಂಗ್ ಮತ್ತು ಎಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಗೋಡೆಗಳಿಗೆ ಹಾನಿಯಾಗಿದೆ. ಈ ಘಟನೆಯಿಂದ ಸದಸ್ಯರುಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಂಡಮಾರುತದ ಪರಿಣಾಮವು ರಾಜ್ಯದೆಲ್ಲೆಡೆ ಭಾರಿ ಹಾನಿಯನ್ನುಂಟುಮಾಡಿದೆ

 

 

 

 ನೀಲಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರಕುಮಾರ್ ಅವರು ಘಟನೆ ನಡೆದ ಸ್ಥಳಕ್ಕೆ  ಭೇಟಿ ನೀಡಿ ತುರ್ತು ಪರಿಹಾರ ಕ್ರಮಕ್ಕೆ ಭಾಗಿಯಾದರು.