ಬಂಟ್ವಾಳ :ಇತ್ತೀಚಿನ ದಿನಗಳಲ್ಲಿ ಯುವಜನತೆ ಮನೋಸ್ಥೈರ್ಯ ಕಳೆದುಕೊಂಡು ಜೀವಕ್ಕೆ ಹಾನಿ ಮಾಡಿಕೊಳ್ಳುವ ಅದೆಷ್ಟೋ ಪ್ರಕರಣಗಳು ನಡೆಯುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೂ ಆತ್ಮಹತ್ಯೆಗೆ ಯತ್ನಿಸುವ ಯುವಜನತೆಯಲ್ಲಿ ಮನೋದೌರ್ಬಲ್ಯ ಹೆಚ್ಚಾಗಿದೆ. ಅದರಂತೆ ಇದೀಗ ದಿನನಿತ್ಯ ಹೋಗುವಂತೆ ಬಾಡಿಗೆಗೆಂದು ಹೊರಟಿದ್ದ ವಿಟ್ಲದ ಯುವಕ ಏಕಾಏಕಿ ನಾಪತ್ತೆಯಾಗಿದ್ದಾನೆ.
ರಿಕ್ಷಾ ಚಾಲಕ ಧನರಾಜ್ ಮಿಸ್ಸಿಂಗ್, ಮೊಬೈಲ್ ಸ್ವಿಚ್ಡ್ ಆಫ್....!!
ಬಂಟ್ವಾಳದ ವೀರಕಂಭ ಗ್ರಾಮದ ಬಾಯಿಲ ನಿವಾಸಿ ಧನರಾಜ್ ಬಾಡಿಗೆಗೆಂದು ಹೊರಟಿದ್ದು ನಂತರ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ನ.28ರಂದು ಇವರು ತನ್ನ ಮನೆಯಿಂದ ಆಟೋರಿಕ್ಷಾ ತೆಗೆದುಕೊಂಡು ಬೆಳಿಗ್ಗೆ ಹೊರಟಿದ್ದು ವಾರ ಕಳೆದರೂ ಮನೆಗೆ ಹಿಂತಿರುಗಲಿಲ್ಲ. ಎಲ್ಲಾ ಕಡೆ ವಿಚಾರಿಸಿದಾಗಲೂ ಸುಳಿವು ಸಿಗದ ಕಾರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನರಾಜ್ ನ ರಿಕ್ಷಾ ಇದೀಗ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದು ಇವರ ಮೊಬೈಲ್ ಮಾತ್ರ ಸ್ವಿಚ್ಡ್ ಆಫ್ ಆಗಿದೆ.
ಕಾಣೆಯಾದವರ ಚಹರೆ ಈ ರೀತಿ ಇದೆ:-
ಧನರಾಜ್ ವಯಸ್ಸು- 28 ವರ್ಷ
ತಂದೆಯ ಹೆಸರು:- ಪದ್ಮನಾಭ ನಾಯ್ಕ
ಎತ್ತರ:- ಅಂದಾಜು 5 ಅಡಿ
ಧರಿಸಿದ್ದ ಬಟ್ಟೆ ಬಣ್ಣ:- ಕ್ರೀಂ ಕಲರ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್
ಮಾತನಾಡುವ ಭಾಷೆ:- ಕನ್ನಡ, ತುಳು
ದೂರು ನೀಡಿ ಮನೆಯವರು ಹುಡುಕಿಕೊಡುವಂತೆ ಪೊಲೀಸರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಆ ಹಿನ್ನೆಲೆ ಇದೀಗ ತನಿಖೆ ಪ್ರಾರಂಭವಾಗಿದ್ದು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.