ಗೋವಾ, ಡಿಸೆಂಬರ್ 3 2024: ಗೋವಾದ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸದ ಕೋಶಾಧಿಕಾರಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿಜಿ ಅವರು ಆಶ್ರಮದ ಶ್ರೇಷ್ಠ ಆಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಿ, ಅವರಿಗಾದ ಮನಸಂತೋಷವನ್ನು ವ್ಯಕ್ತಪಡಿಸಿದರು. *ಈ ಪುಣ್ಯಭೂಮಿಯ ಚೈತನ್ಯದಿಂದಾಗಿ ಕಳೆದ 25 ವರ್ಷಗಳಲ್ಲಿ ಜನರ ಮನಸ್ಸಿನ ಪ್ರಮುಖ ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಮುಂಬರುವ ವರ್ಷಗಳಲ್ಲಿ ಈ ಶಕ್ತಿಯು ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ* ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರನ್ನು ಪ.ಪೂ. ಸ್ವಾಮಿ ಗೋವಿಂದದೇವ ಗಿರಿಜಿ ಇವರು ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣ ಭೇಟಿ ಮಾಡಿದರು.
ನಾವು ಭಾರತವನ್ನು ಮೊದಲಿನಂತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತೇವೆ ಆದರೆ ಭಾರತವು ವಿಶ್ವಗುರುವಿನ ಸ್ಥಾನವನ್ನು ಅಷ್ಟು ಸುಲಭವಾಗಿ ತಲುಪಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಎಲ್ಲಿಂದಾದರೂ ಶಕ್ತಿಯನ್ನು ತುಂಬುವ ಅಗತ್ಯವಿದೆ. ಮುಂಬೈಯ ಬಾಬಾ ಪರಮಾಣು ವಿದ್ಯುತ್ ಕೇಂದ್ರ ಶಕ್ತಿಯನ್ನು ಉತ್ಪಾದಿಸುತ್ತದೆ ಅದರಿಂದಲೇ ಭಾರತದಾದ್ಯಂತ ಜನರು ಈ ಶಕ್ತಿಯನ್ನು ಬಳಸಲು ಸಾಧ್ಯವಾಗುತ್ತದೆ. ಹಾಗೆಯೇ ಈ ಸನಾತನ ಆಶ್ರಮವು ಕೂಡ ಆಧ್ಯಾತ್ಮಿಕ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಶಕ್ತಿಯು ಆಕಾಶದಲ್ಲಿ ಹರಡಿ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುವಂತಾಗುತ್ತದೆ ಎಂದು ಹಾರೈಸಿದರು.
ಹಾಗೆಯೇ ಹಲವಾರು ಮಹಾತ್ಮರು ಹಲವೆಡೆ ತಪಸ್ಸು ಮಾಡಿ ಕಾಲಂತರಗಳಲ್ಲಿ ಅದು ಧರ್ಮದ ಪ್ರಭಾವವನ್ನು ಹೇಗೆ ಜಾಗ್ರತಗೊಳಿಸುತ್ತಿದೆಯೋ ಹಾಗೆಯೇ ಈ ಸನಾತನ ಆಶ್ರಮವು ರಾಷ್ಟ್ರಕ್ಕೆ ಶಕ್ತಿ ನೀಡುವ ಉಜ್ವಯ ಕೇಂದ್ರಬಿಂದುವಾಗಿದೆ ಎಂದೂ ಈ ಕೇಂದ್ರಕ್ಕೆ ನಾನು ಅತ್ಯಂತ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಜೊತೆಗೆ ಈ ಶಕ್ತಿಯ ಮೂಲ ಪ್ರವಾಹವು ಪೂಜ್ಯನೀಯ ಡಾ. ಜಯಂತ ಹಠವಲೆಯವರು ಇಂದು ಅವರ ದರ್ಶನದಿಂದ ಕಂಡುಬಂದಿತು ಎಂದೂ ಅವರ ವ್ಯಕ್ತಿತ್ವ ನನಗೆ ಬಹಳ ಸಂತೋಷ ಮತ್ತು ಪ್ರಭಾವಿತಗೊಳಿಸಿದೆ. ಅವರಿಗೆ ನನ್ನ ಹೃತ್ಪೂರ್ವಕ ನಮಗಳು ಎಂದರು.
ಅದಲ್ಲದೆ ನಾನು ಎಲ್ಲರಿಗೂ ಗೀತೆಯನ್ನು ಕಳಿಸುತ್ತೇನೆ ಆ ಗೀತೆಗಳನ್ನು ಸನಾತನ ಆಶ್ರಮದಲ್ಲಿ ಆಚರಿಸಲ್ಪಡುತ್ತಿರುವುದು ಕಂಡು ಬಂತು ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಯೋಜನಾ ಕೌಶಲ್ಯಗಳಂತಹ ಮೈಕ್ರೋ ಮ್ಯಾನೇಜ್ಮೆಂಟ್ *ಸೂಕ್ಷ್ಮ ನಿರ್ವಹಣೆ*ಕಲಿಯಲು ಯೋಗ್ಯವಾಗಿದೆ ಎಂದು ಅದು ಆಶ್ರಮದಲ್ಲಿ ನೋಡಲು ಸಿಗುತ್ತದೆ ಎಂದು ಹೇಳಿದರು.