ಮಧೂರು:ಬಾಂಗ್ಲಾ ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಕೊನೆಯಾಗಲಿ!!! ಅಲ್ಲಿನ ಹಿಂದೂಗಳ ರಕ್ಷಣೆ ಆಗಲಿ ಎಂದು ಶ್ರೀ ಚೌಕರು ಗುಳಿಗ ಶ್ರೀ ಕೊರಗತನಿಯ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ!!!

  • 04 Dec 2024 03:24:56 PM

ಮಧೂರು : ಬಾಂಗ್ಲಾದೇಶದಲ್ಲಿ ಹಿಂದೂ ಸಮೂಹದ ಮೇಲಾಗುವ ದೌರ್ಜನ್ಯ ಕ್ಕೆ ಕೊನೆಯಾಗಲಿ ಹಿಂದೂ ಧರ್ಮದ ರಕ್ಷಣೆ ಯಾಗಲಿ ಎಂದು ಎಲ್ಲಾ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಪ್ರಾರ್ಥಿಸುವಂತೆ ಶ್ರೀ ಸೌಕಾರ ಗುಳಿಗ ಶ್ರೀ ಕೊರಗ ತನಿಯ ದಿವ್ಯ ಸನ್ನಿಧಿ ಉಡುವ ಕಜೆ ಸಿರಿಬಾಗಿಲು ಬೆದ್ರಡ್ಕದಲ್ಲಿ ಡಿಸೆಂಬರ್ 3 ರಂದು ವಿಶೇಷ ಪ್ರಾರ್ಥನೆ ಸೇವೆ ನಡೆಸಿದರು.

 

ಬಾಂಗ್ಲಾ ಹಿಂದುಗಳ ಮೇಲಿನ ದಾಳಿಯು ಕೊನೆಯಾಗಲಿ, ಧರ್ಮ ರಕ್ಷಣೆಯಾಗಲಿ, ಪರಿಸ್ಥಿತಿ ಸುಧಾರಿತವಾಗಲಿ ಎಂದು ಶ್ರೀ ದೇವರಲ್ಲಿ ಬೇಡಿಕೊಂಡು ವಿಶೇಷ ಪ್ರಾರ್ಥನೆ ಸೇವೆ ನೆರವೇರಿತು.

 

 ದೈವದಪಾತ್ರಿ ಶ್ರೀ ರಾಮಚಂದ್ರರವರ ಮಾರ್ಗದರ್ಶನದಲ್ಲಿ, ಮಧೂರು ಗ್ರಾಮ ಪಂಚಾಯತ್ 20ನೇ ಸಿರಿಬಾಗಿಲು ವಾರ್ಡುಸದಸ್ಯ ಶ್ರೀ ಉದಯ ಕುಮಾರ್ ಸಿ ಯಚ್ ಹಾಗೂ ಭಕ್ತರ ಸಮ್ಮುಖದಲ್ಲಿ ಈ ವಿಶೇಷ ಪ್ರಾರ್ಥನೆ ನಡೆಯಿತು????????????????????????