ಮಂಗಳೂರು:ಹಲವಾರು ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆ ಹಾಗೂ ನಿರ್ದೇಶನದ ಬಹು ನಿರೀಕ್ಷಿತ UI ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಸಿನಿಮಾದ ಗೆಲುವಿಗಾಗಿ ಉಪ್ಪಿ ಕಡಲ ನಗರಿ ಮಂಗಳೂರಿನಲ್ಲಿ ಟೆಂಪಲ್ ರನ್ ನಡೆಸಿದ್ದಾರೆ. ಬಳಿಕ ಮಂಗಳೂರಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಉಪ್ಪಿ ಟೆಂಪಲ್ ರನ್!
ಮಂಗಳೂರಿಗೆ ಆಗಮಿಸಿದ ನಟ ಉಪ್ಪೇಂದ್ರ ಮೊದಲಿಗೆ ಸುಪ್ರಸಿದ್ಧ ದೇವಸ್ಥಾನ ಕಟೀಲಿಗೆ ಭೇಟಿ ನೀಡಿ ದುರ್ಗಾಪರಮೇಶ್ವರಿಯ ದರ್ಶನ ಪಡೆದಿದ್ದಾರೆ. ಬಳಿಕ ಕೊರಗಜ್ಜನ ಕಟ್ಟೆಗೆ ತೆರಳಿ UI ಸಿನಿಮಾದ ಗೆಲುವಿಗಾಗಿ ಪ್ರಾರ್ಥನೆ ನಡೆಸಿದ್ದಾರೆ.
ಪ್ರತ್ರಿಕಾ ಭವನದಲ್ಲಿ ಮಾತುಕತೆ!
ದೇಗುಲಗಳ ಭೇಟಿಯ ಬಳಿಕ ಮಂಗಳೂರಿನ ಜಿಲ್ಲಾ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ನಟ ಉಪ್ಪೇಂದ್ರ ಮಾಧ್ಯಮಗಳೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. 'UI ಎಂಬುದು ನಮ್ಮ-ನಿಮ್ಮ ಜಗತ್ತು. ಸಮಾಜದ ಸತ್ಯಕತೆಗಳನ್ನು ಸಿನಿಮಾ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ' ಎಂದಿದ್ದಾರೆ. UI ಸಿನಿಮಾ ಡಿಸೆಂಬರ್ 20 ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.