ಮಹಾರಾಷ್ಟ್ರ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಹೆಸರು ಅಂತಿಮವಾಗಿದೆ. ಸದ್ಯ, ಮುಖ್ಯಮಂತ್ರಿಯಾಗುವುದು ಸ್ಪಷ್ಟವಾದ ಬಳಿಕ ತಮ್ಮ ಮೊದಲ ಭಾಷಣದಲ್ಲಿ ಫಡ್ನವಿಸ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.
ಫಡ್ನವಿಸ್ ಹೇಳಿದ್ದೇನು?
ಮುಖ್ಯಮಂತ್ರಿಯಾಗುವುದು ಅಂತಿಮವಾದ ಬಳಿಕ ದೇವೇಂದ್ರ ಫಡ್ನವಿಸ್ ಅವರು ಭಾಷಣ ಮಾಡಿದ್ದಾರೆ. 'ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರು. ಮೋದಿಯವರ ಬೆಂಬಲವಿದ್ದರೆ ಎಲ್ಲವೂ ಸಾಧ್ಯ. ನಮ್ಮ ಪ್ರಚಂಡ ಗೆಲುವಿನ ಹಿಂದೆ ಮೋದಿ ಹಾಗೂ ಅವರ ಜನಪ್ರಿಯತೆ ಬಹಳಷ್ಟು ಕೊಡುಗೆ ನೀಡಿದೆ. ಆದ್ದರಿಂದ ಗೆದ್ದ ಪ್ರತಿಯೊಬ್ಬ ಜನ ಪ್ರತಿನಿಧಿಯೂ ಮೋದಿಯವರಿಗೆ ಆಭಾರಿಯಾಗಿರಬೇಕು' ಎಂದಿದ್ದಾರೆ.
ಡಿ.5ರಂದು ಅಧಿಕಾರ ಸ್ವೀಕಾರ!
ಇದೇ ಡಿಸೆಂಬರ್ 5 ರಂದು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಅವರು 2000 ವಿಐಪಿ ಗಳು ಹಾಗು 4000 ಕಾರ್ಯಕರ್ತರ ಸಮ್ಮುಖದಲ್ಲಿ ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಕಳೆದ ನವೆಂಬರ್ 20 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಯಾಯುತಿ ಮೈತ್ರಿ ಒಕ್ಕೂಟ ಭರ್ಜರಿ ಜಯ ದಾಖಲಿಸಿತ್ತು.