ಬಂಟ್ವಾಳ ಹಿಂದು ಜಾಗರಣ ವೇದಿಕೆಯ ಆಶ್ರಯದಲ್ಲಿ ಅಯೋಧ್ಯೆ ವಿಜಯೋತ್ಸವ: ಬಿ.ಸಿ.ರೋಡಿನಲ್ಲಿ ಡಿಸೆಂಬರ್ 6ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ!!!!!

  • 05 Dec 2024 06:58:01 AM

ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ವತಿಯಿಂದ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಆಯೋಜನೆಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ರಕೇಶ್ವರೀ ದೇವಸ್ಥಾನ ಬಿಸಿ ರೋಡ್ ನಲ್ಲಿ ಡಿಸೆಂಬರ್ 6 ಶುಕ್ರವಾರದಂದುನಡೆಯಲಿದೆ.

ಈ ಕಾರ್ಯಕ್ರಮದ ಪ್ರಾರಂಭವು ಮಧ್ಯಾಹ್ನ 11ಕ್ಕೆ ಸಭಾ ಕಾರ್ಯಕ್ರಮದಿಂದ ಆರಂಭವಾಗಲಿದೆ. ಸಭೆಯ ಅಧ್ಯಕ್ಷತೆಯನ್ನು ದೈವ ನೃತ್ಯಕಾರ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಲೋಕಯ್ಯ ಸೇರಾ ಅವರು ವಹಿಸಿಕೊಳ್ಳಲಿದ್ದಾರೆ. ಕೊಂಡೆವೂರು ಮಠ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

 

ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಖ್ಯಾತ ಯಕ್ಷಗಾನ ಕಲಾವಿದ ಶ್ರೀ ದಿನೇಶ್ ಕಾವಳಕಟ್ಟೆ ನೀಡಲಿದ್ದಾರೆ. ಮಹಾಪೂಜೆಯು ಮಧ್ಯಾಹ್ನ 12:00 ರಿಂದ 12:30 ರವರೆಗೆ ನಡೆಯಲಿದೆ. ಪೂಜೆ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. 

 

 ಬೆಳಗ್ಗೆ 9:00 ಗಂಟೆಯಿಂದ ನಾಗಶ್ರೀ ಮಿತ್ರ ವೃಂದ, ಕಮ್ಮಾಜೆ-ತೆಂಕಬೆಳ್ಳೂರು ಅವರ ವತಿಯಿಂದ ಭಜನ ಕಾರ್ಯಕ್ರಮವು ನಡೆಯಲಿದೆ.

 

ಅನ್ನದಾನಕ್ಕೆ ಹಸಿರುವಾಣಿ ಹೊರಕಾಣಿಕೆಗಳನ್ನು ಸಮರ್ಪಿಸಲಿಚ್ಚಿಸುವವರು ಸಂಘಟಕರಿಗೆ ಒಂದು ದಿನ ಮುಂಚಿತವಾಗಿ ತಲುಪಿಸಬೇಕೆಂದು ವಿನಂತಿಸಿ ಕೊಂಡಿದ್ದಾರೆ.

 

ಹಿಂದೂ ಜಾಗರಣ ವೇದಿಕೆ ಬಂಟ್ವಾಳ ಸಮಸ್ತ ಹಿಂದೂ ಬಾಂಧವರಿಗೂ ಈ ಕಾರ್ಯಕ್ರಮಕ್ಕೆ ಸ್ವಾಗತವನ್ನು ಬಯಸಿದ್ದಾರೆ.