ಅಸ್ಸಾಂ : ಗೋಮಾಂಸ ಸೇವನೆ ಹಾಗೂ ಮಾರಾಟದ ಬಗ್ಗೆ ದೇಶದಾದ್ಯಂತ ಸಾಕಷ್ಟು ಚರ್ಚೆಯಿದೆ ಆದರೆ ಯಾವ ರಾಜ್ಯವೂ ಕೂಡ ಗೋಹತ್ಯೆ ಬಗ್ಗೆ ಕಠಿಣ ಕ್ರಮ ಕೈಗೊಂಡಿಲ್ಲ. ಇದೀಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಗೋಹತ್ಯೆ ಮಾಡುವ ಕಟುಕರ ವಿರುದ್ಧ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ.ಈ ಬಗೆಗಿನ ವರದಿ ಇಲ್ಲಿದೆ.
ಗೋಮಾಂಸ ಸೇವನೆ, ಮಾರಾಟ ನಿಷೇಧ!
ಅಸ್ಸಾಂ ಸಿಎಂ ಹಿಮಂತ ಶರ್ಮಾ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ಗೋಮಾಂಸ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸಮರ್ಥನೆ ನೀಡಿದ ಸಿಎಂ, '2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯು ರಾಜ್ಯದಲ್ಲಿ ಎಲ್ಲಾ ಜಾನುವಾರುಗಳ ಸಾಗಣೆ, ಹತ್ಯೆ ಮತ್ತು ಗೋಮಾಂಸ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುತ್ತದೆ. ನಾವು ಈ ಹಿಂದೆ ಅಸ್ಸಾಂನಲ್ಲಿ ಗೋವುಗಳನ್ನು ರಕ್ಷಿಸುವ ಮಸೂದೆ ಪರಿಚಯಿಸಿದ್ದೇವೆ, ಅದರಲ್ಲಿ ಯಶಸ್ವಿಯೂ ಆಗಿದ್ದೇವೆ' ಎಂದು ಹೇಳಿದರು.
ನಿಯಮ ತಪ್ಪಿದರೆ ಕಠಿಣ ಕ್ರಮ!
ಕೇವಲ ಗೋಮಾಂಸ ಸೇವನೆ ಹಾಗೂ ಮಾರಾಟ ನಿಷೇಧ ಮಾತ್ರವಲ್ಲದೆ ಈ ಹೊಸ ಆದೇಶ ಮೀರಿದವರಿಗೆ ಕಠಿಣ ಕ್ರಮವನ್ನು ಕೂಡ ಜಾರಿಗೊಳಿಸಲಾಗಿದೆ. ಅಸ್ಸಾಂನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ 3ರಿಂದ 8 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 3 ರಿಂದ 5 ಲಕ್ಷಗಳ ವರೆಗೆ ದಂಡ ವಿಧಿಸಲಾಗುತ್ತದೆ.